ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ASI ಸಮೀಕ್ಷೆಗೆ ಅನುಮತಿಯಿಲ್ಲ: ಆಡಳಿತ ಮಂಡಳಿ

Published 23 ಆಗಸ್ಟ್ 2024, 2:57 IST
Last Updated 23 ಆಗಸ್ಟ್ 2024, 2:57 IST
ಅಕ್ಷರ ಗಾತ್ರ

ಪ್ರಯಾಗ್‌ರಾಜ್: ಜ್ಞಾನವಾಪಿ ಮಸೀದಿಯ 'ವಝುಖಾನಾ' ಪ್ರದೇಶವನ್ನು (ಪ್ರಾರ್ಥನೆಗೂ ಮುನ್ನ ಅಂಗಾಂಗ ಶುಚಿಗೊಳಿಸುವ ಸ್ಥಳ) ಸಂರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಆದೇಶವಿರುವುದರಿಂದ ಈ ಪ್ರದೇಶದಲ್ಲಿ ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಮಸೀದಿಯ ಆಡಳಿತ ಮಂಡಳಿ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.

ಈ ಬಗ್ಗೆ ಅಂಜುಮನ್ ಇಂತೆಜಾಮಿಯಾ ಸಮಿತಿಯು ಗುರುವಾರ ಅಲಹಾಬಾದ್ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ ) ವಝುಖಾನಾದಲ್ಲಿ ಸಮೀಕ್ಷೆ ನಡೆಸುವಂತೆ ಕೋರಿತ್ತು.

ವಝುಖಾನ ಮತ್ತು 'ಶಿವಲಿಂಗ'ಕ್ಕೆ ಸಂಬಂಧಿಸಿದ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಈ ಪ್ರದೇಶವನ್ನು ಸಂರಕ್ಷಿಸಲು ತಡೆಯಾಜ್ಞೆ ಇದೆ. ಅದರ ಸುರಕ್ಷತೆ ಮತ್ತು ಭದ್ರತೆಯ ಜವಾಬ್ದಾರಿಯನ್ನು ತಮಗೆ ವಹಿಸಲಾಗಿದೆ ಆದ್ದರಿಂದ, ಯಾವುದೇ ಮುಂದಿನ ಕ್ರಮಕ್ಕೆ ಅನುಮತಿಸಲಾಗುವುದಿಲ್ಲ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT