ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನನಾಯಕ ಕರ್ಪೂರಿಗೆ ಭಾರತ ರತ್ನ: 70 ಕೋಟಿ ಬಡವರಿಗೆ PM ಮೋದಿ ಗೌರವ; ಶಾ

Published 24 ಜನವರಿ 2024, 12:57 IST
Last Updated 24 ಜನವರಿ 2024, 12:57 IST
ಅಕ್ಷರ ಗಾತ್ರ

ನವದೆಹಲಿ: ‘ಜನನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ 70 ಕೋಟಿ ಬಡವರನ್ನು ಗೌರವಿಸಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಹೋರಾಟಗಾರ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ರಾಷ್ಟ್ರಪತಿ ಭವನ ಮಂಗಳವಾರ ಆದೇಶ ಹೊರಡಿಸಿತ್ತು.

ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡ ಅಮಿತ್ ಶಾ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

‘ಜ. 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯ ನೆರವೇರಿಸಿದ ಮೋದಿ, ಜ. 23ರಂದು ರಾಮನ ಭಕ್ತರಾದ ಬಡವರ ಕಾರ್ಯವನ್ನು ನೆರವೇರಿಸಿದ್ದಾರೆ. ಕರ್ಪೂರಿಗೆ ಅವರಿಗೆ ಭಾರತ ರತ್ನ ನೀಡುವ ಮೂಲಕ ಬಡವರು, ಅವಕಾಶ ವಂಚಿತರು, ಹಿಂದುಳಿದವರು, ದಲಿತ ಮತ್ತು ಆದಿವಾಸಿಗಳನ್ನು ಗೌರವಿಸಿದ್ದಾರೆ’ ಎಂದಿದ್ದಾರೆ.

‘ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಸಂವಿಧಾನದ ಮೌಲ್ಯವನ್ನು ಪ್ರಧಾನಿ ಮೋದಿ ಎತ್ತಿ ಹಿಡಿದಿದ್ದಾರೆ. ಕರ್ಪೂರಿ ಅವರು ಬಡ ಕುಟುಂಬದಲ್ಲಿ ಜನಿಸಿದ್ದರೂ, ತಮ್ಮ ಆಲೋಚನೆಯಿಂದ ಅತ್ಯಂತ ಬಲಿಷ್ಠ ವ್ಯಕ್ತಿತ್ವ ಹೊಂದಿದ್ದರು. ಸಮಾಜದ ಪ್ರತಿಯೊಂದು ಸ್ತರದ ಜನರ ಏಳಿಗಾಗಿ ದುಡಿದ ಅವರು ಎಂದಿಗೂ ತಾವು ನಂಬಿರುವ ತತ್ವಗಳನ್ನು ಬಿಟ್ಟವರಲ್ಲ. ಅವರ ಪ್ರಯತ್ನದಿಂದಾಗಿ ಹಿಂದಿ ಭಾಷೆಗೂ ಹೊಸ ಸ್ಪರ್ಶ ದೊರೆಯಿತು’ ಎಂದು ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT