ಗುವಾಹಟಿ: ದಿಬ್ರುಗಢ ವಿಮಾನ ನಿಲ್ದಾಣಕ್ಕೆ ಹೆಸರಾಂತ ಸಂಗೀತಗಾರ ಭೂಪೇನ್ ಹಜಾರಿಕಾ ಅವರ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಅಸ್ಸಾಂ ವಿಧಾನಸಭೆಯು ಸರ್ವಾನುಮತದಿಂದ ಸೋಮವಾರ ಅಂಗೀಕರಿಸಿದೆ.

ಈ ಉದ್ದೇಶಕ್ಕಾಗಿ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ, ರಾಜ್ಯ ಸಾರಿಗೆ ಸಚಿವ ಜೋಗೆನ್ ಮೋಹನ್ ಅವರು, ಕೇಂದ್ರ ಸರ್ಕಾರವು ದಿಬ್ರುಗಢ ವಿಮಾನ ನಿಲ್ದಾಣವನ್ನು ‘ಭಾರತ ರತ್ನ ಭೂಪೇನ್ ಹಜಾರಿಕಾ ವಿಮಾನ ನಿಲ್ದಾಣ, ದಿಬ್ರುಗಢ’ ಎಂದು ಮರುನಾಮಕರಣ ಮಾಡುವಂತೆ ಶಿಫಾರಸು ಮಾಡುವ ನಿರ್ಣಯವನ್ನು ಸರ್ಕಾರದ ಪರವಾಗಿ ಮಂಡಿಸಿದರು.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಅನೇಕ ಶಾಸಕರು ತಮ್ಮ ಭಾಷಣವನ್ನು ಹಜಾರಿಕಾ ಅವರ ಹಾಡಿನೊಂದಿಗೆ ಮುಕ್ತಾಯಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.