ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುವಿವಾಹ ನಿಷೇಧ ಕಾಯ್ದೆ ಜಾರಿ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ

Published 6 ಆಗಸ್ಟ್ 2023, 16:18 IST
Last Updated 6 ಆಗಸ್ಟ್ 2023, 16:18 IST
ಅಕ್ಷರ ಗಾತ್ರ

ಗುವಾಹಟಿ: ಬಹುಪತ್ನಿತ್ವ/ಬಹುಪತಿತ್ವ ನಿಷೇಧಿಸುವ ಕುರಿತ ಮಸೂದೆಯನ್ನು ಇದೇ ಹಣಕಾಸು ವರ್ಷದ ಒಳಗಾಗಿ ಮಂಡಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಭಾನುವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕುರಿತ ವರದಿಯನ್ನು ತಜ್ಞರ ಸಮಿತಿ ಇಂದು ಸಲ್ಲಿಸಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ತನ್ನದೇ ಆದ ಕಾನೂನುಗಳನ್ನು ರೂಪಿಸುವುದಕ್ಕೆ ಒಪ್ಪಿಗೆ ಸೂಚಿಸಿದೆ’ ಎಂದರು.

‘ಬಹುಪತ್ನಿತ್ವ/ ಬಹುಪತಿತ್ವ ಕೊನೆಗಾಣಿಸಲು ರಾಜ್ಯ ಸರ್ಕಾರ ರೂಪಿಸುವ ಕಾಯ್ದೆಗೆ ರಾಜ್ಯಪಾಲರ ಬದಲಾಗಿ ರಾಷ್ಟ್ರಪತಿ ಅಂಕಿತ ಹಾಕುವುದು ಅಗತ್ಯ ಎಂದೂ ಸಮಿತಿ ತಿಳಿಸಿದೆ’ ಎಂದು ಶರ್ಮ ಹೇಳಿದರು.

‘ಇದೇ ಹಣಕಾಸು ವರ್ಷ ಅಂತ್ಯದ ಒಳಗಾಗಿ ಈ ಕಾಯ್ದೆ ಜಾರಿಗೆ ಬರುವುದು ನಿಶ್ಚಿತ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT