ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Election Results 2023: ಮ.ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ, ತೆಲಂಗಾಣದಲ್ಲಿ 'ಕೈ'

Published 3 ಡಿಸೆಂಬರ್ 2023, 1:50 IST
Last Updated 3 ಡಿಸೆಂಬರ್ 2023, 8:41 IST
ಅಕ್ಷರ ಗಾತ್ರ
01:4503 Dec 2023

ಲೋಕಸಭಾ ಚುನಾವಣೆಗೆ ಮುಂಚಿನ ‘ಸೆಮಿಫೈನಲ್‌’ ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಈ ಫಲಿತಾಂಶವು ಬಿಜೆಪಿ ಹಾಗೂ ಅದರ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನೂ ಹೊರಹಾಕಲಿದೆ. ‘ಫೈನಲ್‌’ ಹಣಾಹಣಿಯ ರಣತಂತ್ರ ಗಳ ದಿಕ್ಕನ್ನು ಸಹ ಈ ಫಲಿತಾಂಶ ನಿರ್ಧರಿಸಲಿದೆ ಎಂದು ವ್ಯಾಖ್ಯಾನಿಸಲಾಗಿದೆ. 

01:4503 Dec 2023

ನವೆಂಬರ್‌ 7ರಿಂದ 30ರ ಅವಧಿಯಲ್ಲಿ ಐದು ರಾಜ್ಯ ಗಳಿಗೆ ಚುನಾವಣೆ ನಡೆದಿತ್ತು. ಮಿಜೋರಾಂನಲ್ಲಿ ಮಾತ್ರ ಮತ ಎಣಿಕೆ ಸೋಮವಾರ ನಡೆಯಲಿದೆ.

01:5003 Dec 2023

ಯಾರ ವರ್ಚಸ್ಸು ಎಷ್ಟು?

ಈ ಫಲಿತಾಂಶವು ಕಮಲನಾಥ್‌, ಅಶೋಕ್‌ ಗೆಹಲೋತ್‌, ಭೂಪೇಶ್‌ ಬಘೆಲ್‌, ಎ. ರೇವಂತ್ ರೆಡ್ಡಿ (ಎಲ್ಲ ಕಾಂಗ್ರೆಸ್‌ ನಾಯಕರು), ಶಿವರಾಜ ಸಿಂಗ್‌ ಚೌಹಾಣ್‌, ನರೇಂದ್ರ ಸಿಂಗ್‌ ತೋಮರ್‌, ವಸುಂಧರಾ ರಾಜೇ ಸಿಂಧಿಯಾ, ರಮಣ್ ಸಿಂಗ್‌ (ಎಲ್ಲ ಬಿಜೆಪಿ ನಾಯಕರು) ಹಾಗೂ ಕೆ.ಚಂದ್ರಶೇಖರ್ ರಾವ್‌ (ಬಿಆರ್‌ಎಸ್‌) ಅವರ ವರ್ಚಸ್ಸು ಎಷ್ಟಿದೆ ಎಂಬುದನ್ನು ತೋರಿಸಿಕೊಡಲಿದೆ.

01:5003 Dec 2023

638 ಕ್ಷೇತ್ರ, 7,643 ಅಭ್ಯರ್ಥಿಗಳು

ನಾಲ್ಕು ರಾಜ್ಯಗಳ 638 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7,643 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರ ಭವಿಷ್ಯ ಭಾನುವಾರ ನಿರ್ಧಾರ ವಾಗಲಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. 

ಈ ರಾಜ್ಯಗಳು ಒಟ್ಟಾಗಿ 82 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಈ ಕ್ಷೇತ್ರಗಳ ಪೈಕಿ, 2019ರ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ್ದವು. ಉಳಿದ ಸ್ಥಾನಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿದ್ದವು.

01:5603 Dec 2023

ಮತಗಟ್ಟೆ ಸಮೀಕ್ಷೆ ಏನು ಹೇಳುತ್ತಿದೆ?

ಐದು ರಾಜ್ಯಗಳ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ವಿವಿಧ ವಿದ್ಯುನ್ಮಾನ ಮಾಧ್ಯಮಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ. ತೆಲಂಗಾಣ ಹಾಗೂ ಛತ್ತೀಸಗಢ ರಾಜ್ಯಗಳ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ‘ಕೈ’ ಪಾಳಯದ ಪ್ರಬಲ ಸ್ಪರ್ಧೆಯ ನಡುವೆಯೂ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ‘ಭವಿಷ್ಯ’ ನುಡಿದಿವೆ. 

ಮಧ್ಯಪ್ರದೇಶದಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದರೆ, ಕಾಂಗ್ರೆಸ್ ಪಕ್ಷವು ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಆಡಳಿತ ನಡೆಸುತ್ತಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ 10 ವರ್ಷಗಳಿಂದ ಅಧಿಕಾರದಲ್ಲಿದೆ.

02:0803 Dec 2023

ಹೈದರಾಬಾದ್‌ಗೆ ಕರ್ನಾಟಕದ ನಾಯಕರು...

‘ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದ ಕಾಂಗ್ರೆಸ್ ನಾಯಕರು ಹೈದರಾಬಾದ್‌ಗೆ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಲ್ಲದೆ, ಸಚಿವರಾದ ಎನ್‌.ಎಸ್‌. ಬೋಸರಾಜು, ಡಾ.ಎಂ.ಸಿ ಸುಧಾಕರ್, ಶಾಸಕರಾದ ಕೆ.ವೈ. ನಂಜೇಗೌಡ, ಪ್ರದೀಪ್ ಈಶ್ವರ್ ಈ ಹೈಕಮಾಂಡ್ ಸೂಚನೆ ನೀಡಿರುವ ಕಾರಣ ಈಗಾಗಲೇ ಹೈದರಾಬಾದ್‌ಗೆ ತೆರಳಿದ್ದಾರೆ.

02:2703 Dec 2023

ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭ; ಬಿಗಿ ಭದ್ರತೆ

02:2903 Dec 2023

ದೆಹಲಿ ಕಾಂಗ್ರೆಸ್ ಕಚೇರಿಯಿಂದ ಕಂಡುಬಂದ ದೃಶ್ಯ

02:3203 Dec 2023

ಎಲ್ಲ ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ಆರಂಭ

02:3903 Dec 2023

ಅಂಚೆ ಮತಗಳ ಎಣಿಕೆ ಆರಂಭ