ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದಿಂದ ‘ಜಾತ್ಯತೀತ’ ಪದ ಕೈಬಿಡಲಾಗದು: ಸಚಿವ ರಾಮದಾಸ್ ಅಠವಲೆ

ಸನಾತನ ಸಂಸ್ಥೆಗೆ ಪರೋಕ್ಷ ಚಾಟಿ
Last Updated 28 ಆಗಸ್ಟ್ 2018, 8:28 IST
ಅಕ್ಷರ ಗಾತ್ರ

ಮುಂಬೈ: ಯಾರೇ ಬೇಡಿಕೆ ಸಲ್ಲಿಸಿದರೂ ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಖಾತೆ ಸಚಿವ ರಾಮದಾಸ್ ಅಠವಲೆ ತಿಳಿಸಿದರು.

ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ಕೈಬಿಡುವಂತೆ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹನ್ಸ್ ಸೋಮವಾರ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಜಾತ್ಯತೀತತೆಯೇ ದೇಶದಲ್ಲಿ ಏಕಾತೆಯನ್ನು ಉಳಿಸಿಕೊಳ್ಳಲು ನೆರವಾಗಿದೆ. ಜಾತ್ಯತೀತ ಶಬ್ದ ಸಂವಿಧಾನದಲ್ಲಿ ಎಂದೆಂದಿಗೂ ಇರಲಿದೆ’ ಎಂದರು.

ಇದನ್ನೂ ಓದಿ:ಸಂವಿಧಾನದಿಂದ ‘ಜಾತ್ಯತೀತ’ ಪದ ಕೈಬಿಡಲು ಸನಾತನ ಸಂಸ್ಥೆ ಆಗ್ರಹ

ಕಾಂಗ್ರೆಸ್‌ ಮತ್ತು ಇತರ ರಾಜಕೀಯ ಪಕ್ಷಗಳ ಬೇಡಿಕೆಯಂತೆ ಸನಾತನ ಸಂಸ್ಥೆಯನ್ನು ನಿಷೇಧಿಸಿದರೂ ದೊಡ್ಡ ಪ್ರಯೋಜನವಾಗದು ಎಂದು ಅವರು ಅಭಿಪ್ರಾಯಪಟ್ಟರು.

‘ಕೊಲ್ಲುವ ಮೂಲಕ ಅಭಿಪ್ರಾಯ ಹತ್ತಿಕ್ಕಲಾಗದು’: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡುವ ಮೂಲಕ ಆತನ ಅಭಿಪ್ರಾಯಗಳನ್ನುಹತ್ತಿಕ್ಕಲಾಗದು ಎಂದು ಅಠವಲೆ ಪರೋಕ್ಷವಾಗಿ ಸನಾತನ ಸಂಸ್ಥೆಗೆ ಚಾಟಿ ಬೀಸಿದರು. ಯಾರೊಬ್ಬರೂ ಹಿಂಸೆಯಲ್ಲಿ ತೊಡಗಿಕೊಳ್ಳುವಂತಿಲ್ಲ. ಹಿಂಸಾಚಾರದಲ್ಲಿ ತೊಡಗಿಕೊಳ್ಳುವವರು ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT