ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿರುವ ಆತಿಶಿ ಅವರು ಡಮ್ಮಿ (ನೆಪ ಮಾತ್ರದ) ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಎಎಪಿ ರಾಜ್ಯಸಭೆ ಸಂಸದೆ ಸ್ವಾತಿ ಮಾಲಿವಾಲ್ ಅವರು ಮಂಗಳವಾರ ವ್ಯಂಗ್ಯವಾಡಿದ್ದಾರೆ.
‘ದೆಹಲಿ ಜನರಿಗೆ ಇದು ದುರದೃಷ್ಟದ ದಿವಸ. ಭಯೋತ್ಪಾದಕ ಅಫ್ಜಲ್ ಗುರು ಪರವಾಗಿ ಹೋರಾಡಿದ ಕುಟುಂಬದ ಸದಸ್ಯೆಯೊಬ್ಬರು ಇಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಅಫ್ಜಲ್‌ನನ್ನು ಗಲ್ಲಿಗೇರಿಸಬಾರದು ಎಂದು ಕೋರಿ ಆತಿಶಿ ಪೋಷಕರು ಹಲವಾರು ಬಾರಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು’ ಎಂದು ಸ್ವಾತಿ ಆರೋಪಿಸಿದ್ದಾರೆ.
ಸ್ವಾತಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಎಪಿ ಶಾಸಕ ದಿಲೀಪ್ ಪಾಂಡೆ, ‘ಸ್ವಾತಿ ಅವರು ಎಎಪಿಯಿಂದ ಟಿಕೆಟ್ ಪಡೆದು ರಾಜ್ಯಸಭೆಗೆ ಹೋಗಿರುವವರು. ಆದರೆ, ಅವರು ಬಿಜೆಪಿಯ ಆಣತಿಯಂತೆ ಮಾತನಾಡುವವರು’ ಎಂದಿದ್ದಾರೆ.
ಸ್ವಾತಿಗೆ ಸ್ವಲ್ಪವಾದರೂ ಮಾನವಿದ್ದರೆ ಅವರು ಎಎಪಿಯ ರಾಜ್ಯಸಭಾ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳಬೇಕು