ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ವ್ಯಸನ: ಪ್ರಶ್ನಿಸಿದ ತಾಯಿ ಕೊಂದ ಮಗ

Published 14 ಅಕ್ಟೋಬರ್ 2023, 14:26 IST
Last Updated 14 ಅಕ್ಟೋಬರ್ 2023, 14:26 IST
ಅಕ್ಷರ ಗಾತ್ರ

ಕಾಸರಗೋಡು (ಪಿಟಿಐ): ಮಗನ ಮೊಬೈಲ್‌ ವ್ಯಸನವನ್ನು ಪ್ರಶ್ನಿಸಿದ್ದಕ್ಕೆ ಆತನಿಂದ ಹಲ್ಲೆಗೊಳಗಾಗಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಣ್ಣಿಚಿರದ ರುಕ್ಮಿಣಿ (63) ಶನಿವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರದ ಹಿಂದೆ ರುಕ್ಷ್ಮಿಣಿ ತನ್ನ ಪುತ್ರ ಸುಜಿತ್‌ನ ಮೊಬೈಲ್‌ ವ್ಯಸನದ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಆತ, ತಾಯಿಯ ತಲೆಯನ್ನು ಗೋಡೆಗೆ ಬಡಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.

‘ಪದೇ ಪದೇ ತಾಯಿ ಪ್ರಶ್ನಿಸುತ್ತಿದ್ದಕ್ಕೆ ಸಿಟ್ಟಿನಿಂದ ಹಲ್ಲೆ ನಡೆಸಿದೆ ಎಂಬುದನ್ನು ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈತ ಮಾನಸಿಕ ಅಸ್ವಸ್ಥನಾಗಿರುವುದರಿಂದ, ಕೋಯಿಕ್ಕೋಡ್‌ನ ಕುದಿರವಟ್ಟಂನ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT