ಲಖನೌ: ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಸ್ಥಳೀಯ ಪಕ್ಷವೊಂದರ ಮುಖಂಡನ ಪರವಾಗಿ ಹೇಳಿಕೆ ನೀಡಿದ್ದ ತನ್ನ ಪಕ್ಷದ ಶಾಸಕ ಸುರೇಂದ್ರ ಸಿಂಗ್‌ಗೆ ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ಘಟಕ ಶೋಕಾಸ್ ನೋಟಿಸ್ ನೀಡಿದೆ.

‘ನೋಟಿಸ್ ತಲುಪಿದ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡಬೇಕು. ಅಲ್ಲಿವರೆಗೂ ಯಾವುದೇ ಹೇಳಿಕೆ ನೀಡಬಾರದು‘ ಎಂದು ಸೂಚಿಸಿರುವುದಾಗಿ ಬಿಜೆಪಿ ಮುಖಂಡ ಸ್ವತಂತ್ರ ದೇವ್ ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಂಗಡಿಗಳಿಗೆ ಪಡಿತರ ವಿತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಬಲ್ಲಿಯಾ ಜಿಲ್ಲೆಯ ದುರ್ಜನ್‌ಪುರ ಹಳ್ಳಿಯಲ್ಲಿ ನಡೆದ ಘರ್ಷಣೆಯಲ್ಲಿ, ಸ್ಥಳೀಯ ಪಕ್ಷದ ಮುಖಂಡ ಧೀರೇಂದ್ರ ಪ್ರತಾಪ್ ಸಿಂಗ್, 46 ವರ್ಷದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ. ಘಟನೆಯಲ್ಲಿ ಆ ವ್ಯಕ್ತಿ ಸಾವನ್ನಪ್ಪಿದ. ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಶಾಸಕ ಸುರೇಂದ್ರ ಸಿಂಗ್, ‘ಪರಿಸ್ಥಿತಿ ಕೈ ಮೀರಿತ್ತು. ಹಾಗಾಗಿ ಅವರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ‘ ಎಂದು ಧೀರೇಂದ್ರ ಸಿಂಗ್ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.