ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಕಳ್ಳಸಾಗಣೆದಾರರಿಂದ ಬಾಂಬ್‌ ದಾಳಿ

Last Updated 11 ಜುಲೈ 2019, 17:53 IST
ಅಕ್ಷರ ಗಾತ್ರ

ಕೋಲ್ಕತ್ತ: ಗೋ ಕಳ್ಳಸಾಗಣೆದಾರರ ಬಾಂಬ್‌ ದಾಳಿಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರೊಬ್ಬರ ಕೈ ತುಂಡಾಗಿದ್ದು, ಶ್ವಾಸಕೋಶ ಮತ್ತು ಹೊಟ್ಟೆಗೆ ‘ಪೆಲೆಟ್‌’ಗಳು ಹೊಕ್ಕಿವೆ.

ಉತ್ತರ24 ಪರಗಣಜಿಲ್ಲೆಯ ಭಾರತ– ಬಾಂಗ್ಲಾದೇಶ ಗಡಿ ಚೆಕ್‌ಪೋಸ್ಟ್ಆಂಗ್ರೈಲ್‌ನಲ್ಲಿಗುರುವಾರ ಬೆಳಗಿನ ಜಾವ 3.30ಗಂಟೆಗೆ ದುರ್ಘಟನೆ ನಡೆದಿದೆ. ಯೋಧ ಅನಿಸೂರ್‌ ರೆಹಮಾನ್‌ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದು, ಬಾಂಗಾಂವ್‌ನಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಂಗ್ಲಾದೇಶದ 25 ಕಳ್ಳಸಾಗಣೆದಾರರು ಚೆಕ್‌ಪೋಸ್ಟ್‌ಗೆ 200 ಮೀ. ದೂರದಲ್ಲಿ ಭಾರತದಿಂದ ಕರೆತಂದಿದ್ದ ಗೋವುಗಳೊಂದಿಗೆ ಬಂದಿದ್ದರು. ಚೆಕ್‌ಪೋಸ್ಟ್ ಸಮೀಪ ಬರುತ್ತಿದ್ದಂತೆ ನಾಡಬಾಂಬ್‌ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶದ ಗಡಿ ಭದ್ರತಾ ಪಡೆ (ಬಿಜಿಬಿ) ಕಳ್ಳಸಾಗಣೆದಾರರನ್ನು ಹಿಡಿಯಲು ಪ್ರಯತ್ನಿಸಲಿಲ್ಲ ಎಂದು ಬಿಎಸ್‌ಎಫ್‌ ಆರೋಪಿಸಿದ್ದು, ಪಶ್ಚಿಮ ಬಂಗಾಳದ ದಕ್ಷಿಣದ ಗಡಿಯುದ್ದಕ್ಕೂ ಪ್ರತಿಭಟನೆ ದಾಖಲಿಸಿದೆ ಹಾಗೂ ಘಟನೆಯನ್ನು ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT