ಕೋಲ್ಕತ್ತಾ: ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮುರ್ಶಿದಾಬಾದ್ ಜಿಲ್ಲೆಯ ಜಾಫರಾಬಾದ್ನಲ್ಲಿ ನಡೆದ ಕೋಮುಗಲಭೆ ವೇಳೆ ನಡೆದ ತಂದೆ–ಮಗನ ಹತ್ಯೆಗೆ ಸಂಬಂಧಿಸಿ ಸಹೋದರರನ್ನು ಪೊಲೀಸರು ಮಂಗಳವಾರ ಬಂಧಿಸಿದರು.

ಕಾಲೂ ನಾದರ್ ಹಾಗೂ ದಿಲ್ದಾರ್ ನಾದರ್ ಬಂಧಿತರು. ಈ ಸಹೋದರರೂ ಜಾಫರಾಬಾದ್ನವರೇ ಆಗಿದ್ದಾರೆ. ಕಾಲೂ ಅವರನ್ನು ಬೀರ್ಭೂಮ್ ಜಿಲ್ಲೆಯ ಮುರಾರಾಯ್ ಎಂಬಲ್ಲಿ ಬಂಧಿಸಲಾಗಿದೆ. ದಿಲ್ದಾರ್ ಅವರನ್ನು ಭಾರತ–ಬಾಂಗ್ಲಾ ಗಡಿ ಪ್ರದೇಶದಲ್ಲಿ ಬಂಧಿಸಲಾಗಿದೆ.

‘ಹತ್ಯೆ ನಡೆದ ಪ್ರದೇಶದಲ್ಲಿ ಇದ್ದ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ. ಈ ಹತ್ಯೆಗೆ ಸಂಬಂಧಿಸಿ ಇನ್ನಿತರರನ್ನು ಗುರುತಿಸಿದ್ದೇವೆ. ಜೊತೆಗೆ ಹತ್ಯೆ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.