ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟಿಂಗ್ ಜಾಹೀರಾತು: ಮಾಧ್ಯಮ ಸಂಸ್ಥೆಗಳಿಗೆ ಎಚ್ಚರಿಕೆ

Last Updated 6 ಏಪ್ರಿಲ್ 2023, 20:46 IST
ಅಕ್ಷರ ಗಾತ್ರ

ನವದೆಹಲಿ: ಬೆಟ್ಟಿಂಗ್‌ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಕಟಿಸದಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಗುರುವಾರ ಮಾಧ್ಯಮ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.

ಕೆಲ ದಿನಗಳ ಹಿಂದೆ ಮುಖ್ಯವಾಹಿನಿಗೆ ಸೇರಿದ ಇಂಗ್ಲಿಷ್‌ ಮತ್ತು ಹಿಂದಿ ದಿನಪತ್ರಿಕೆಗಳು ಈ ಬಗೆಯ ಜಾಹೀರಾತು ಪ್ರಕಟಿಸಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವಾಲಯವು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

‘ಬೆಟ್ಟಿಂಗ್‌ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ಜಾಹೀರಾತು ಹಾಗೂ ಅವುಗಳ ಕುರಿತಾದ ಪ್ರಚಾರದ ವಸ್ತುಗಳನ್ನು ಪ್ರಕಟಿಸದಂತೆ ದಿನಪತ್ರಿಕೆ, ಸುದ್ದಿ ವಾಹಿನಿ, ಆನ್‌ಲೈನ್‌ ಸುದ್ದಿ ಮಾಧ್ಯಮಗಳಿಗೆ ಸೂಚಿಸಲಾಗಿದೆ. ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದೆ.

ತನ್ನ ವೆಬ್‌ಸೈಟ್‌ನಲ್ಲೇ ಕ್ರೀಡಾ ಲೀಗ್‌ವೊಂದನ್ನು ವೀಕ್ಷಿಸುವಂತೆ ಬೆಟ್ಟಿಂಗ್‌ ವೇದಿಕೆಯೊಂದು ಜಾಹೀರಾತಿನ ಮೂಲಕ ಪ್ರೇಕ್ಷಕರನ್ನು ಪ್ರೋತ್ಸಾಹಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವಾಲಯವು ಇದು 1957ರ ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗಲಿದೆ ಎಂದೂ ಹೇಳಿದೆ.

‘ಬೆಟ್ಟಿಂಗ್‌ ಹಾಗೂ ಜೂಜಾಟ ಕಾನೂನುಬಾಹಿರ ಚಟುವಟಿಕೆಗಳಾಗಿದ್ದು, ಇವುಗಳ ಕುರಿತು ಯಾವುದಾದರೂ ಮಾಧ್ಯಮಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜಾಹೀರಾತು ಪ್ರಕಟಿಸುವುದು ವಿವಿಧ ಕಾಯ್ದೆಗಳ ಉಲ್ಲಂಘನೆಯಾಗಲಿದೆ’ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT