ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಟ ವಿಕ್ಟರ್, ತಬಲಾ ವಾದಕ ವಿಕ್ರಂ ಘೋಷ್ ಜೊತೆ RSS ಮುಖ್ಯಸ್ಥ ಭಾಗವತ್ ಚರ್ಚೆ

Published 31 ಡಿಸೆಂಬರ್ 2023, 14:26 IST
Last Updated 31 ಡಿಸೆಂಬರ್ 2023, 14:26 IST
ಅಕ್ಷರ ಗಾತ್ರ

ಕೋಲ್ಕತ್ತ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಭಾನುವಾರ ಹೆಸರಾಂತ ತಬಲಾ ವಾದಕ ವಿಕ್ರಂ ಘೋಷ್ ಮತ್ತು ಹಿರಿಯ ನಟ ವಿಕ್ಟರ್ ಬ್ಯಾನರ್ಜಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು.

ಘೋಷ್‌ ಅವರ ಇಲ್ಲಿನ ಸಾಲ್ಟ್‌ ಲೇಕ್‌ ನಿವಾಸಕ್ಕೆ ತೆರಳಿದ್ದ ಭಾಗವತ್ ಅವರು ಗೋಪ್ಯವಾಗಿ ಕೆಲಹೊತ್ತು ಮಾತುಕತೆ ನಡೆಸಿದರು.

‘ನನ್ನ ಹಾಗೂ ನನ್ನ ಗುರು ಪಂಡಿತ್ ಎಸ್‌.ಶೇಖರ್‌ ಜೀ (ಹೆಸರಾಂತ ಮೃದಂಗ ವಾದಕ), ಸಿತಾರ್ ವಾದಕ ಅಭಿಷೇಕ್‌ ಮಲ್ಲಿಕ್ ಅವರ ಕಲಾ ಪ್ರದರ್ಶನ ಆಲಿಸಿದರು. ಜೊತೆಗೆ ಊಟ ಮಾಡಿದರು’ ಎಂದು ಘೋಷ್‌ ಬಳಿಕ ತಿಳಿಸಿದರು.

ನಂತರ ಭಾಗವತ್ ಅವರು ನಟ ವಿಕ್ಟರ್ ಬ್ಯಾನರ್ಜಿ ಅವರ ನಿವಾಸಕ್ಕೂ ತೆರಳಿ ಚರ್ಚಿಸಿದರು. ಬ್ಯಾನರ್ಜಿ ಅವರು 1991ರ ಲೋಕಸಭೆ ಚುನಾವಣೆಯಲ್ಲಿ ಕೋಲ್ಕತ್ತದ ನಾರ್ಥ್ ವೆಸ್ಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪರಾಭವಗೊಂಡಿದ್ದರು.

ಭಾಗವತ್‌ ಅವರು, ಆಲ್‌ ಇಂಡಿಯಾ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅಧ್ಯಕ್ಷ ಕಲ್ಯಾಣ್ ಚೌಬೆ ಅವರನ್ನು ಶನಿವಾರ ಭೇಟಿಯಾಗಿದ್ದರು. ಚೌಬೆ ಅವರು 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣಾಂಗರ್‌ ಕ್ಷೇತ್ರದಿಂದ ಮಹುವಾ ಮೊಯಿತ್ರಾ ವಿರುದ್ಧ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT