ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಪ್ರವೇಶಿಸಿದ ರಾಹುಲ್‌ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ

Published 7 ಮಾರ್ಚ್ 2024, 13:25 IST
Last Updated 7 ಮಾರ್ಚ್ 2024, 13:25 IST
ಅಕ್ಷರ ಗಾತ್ರ

ಜಲೋದ್: ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯು ಇಂದು ಸಂಜೆ (ಗುರುವಾರ ) ರಾಜಸ್ಥಾನದಿಂದ ಗುಜರಾತ್‌ನ ದಾಹೋದ್ ಜಿಲ್ಲೆಯ ಜಲೋದ್ ಪಟ್ಟಣವನ್ನು ಪ್ರವೇಶಿಸಿದೆ.

ಗುಜರಾತ್‌ನ ದಾಹೋದ್, ಪಂಚಮಹಲ್, ಛೋಟಾ ಉದೇಪುರ್, ಭರೂಚ್, ತಾಪಿ, ಸೂರತ್ ಮತ್ತು ನವಸಾರಿ ಜಿಲ್ಲೆಗಳ ಮೂಲಕ ಸಾಗಿ ಮಾರ್ಚ್‌ 10ರಂದು ಮಹಾರಾಷ್ಟ್ರವನ್ನು ಪ್ರವೇಶಿಸುತ್ತದೆ. ಈ ಜಿಲ್ಲೆಗಳಲ್ಲಿ ಸಾಕಷ್ಟು ಭಾಗಗಳಲ್ಲಿ ಬುಡಗಟ್ಟು ಜನರು ವಾಸಿಸುತ್ತಿದ್ದು, ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ರಾಜ್ಯ ಕಾಂಗ್ರೆಸ್‌ ಘಟಕದ ವಕ್ತಾರ ಮನೀಶ್ ದೋಷಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ನಾಲ್ಕು ದಿನಗಳ ಕಾಲ ಭಾರತ ಜೋಡೊ ನ್ಯಾಯ ಯಾತ್ರೆ ಸಾಗಲಿದೆ. ರಾಹುಲ್ ಗಾಂಧಿ 6 ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೂ ಸಣ್ಣ ಮಟ್ಟದ ಸಭೆಗಳನ್ನೂ ನಡೆಸಲಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರನ್ನು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ಆಮ್ ಆದ್ಮಿ ಪಕ್ಷದದವರು ಸ್ವಾಗತಿಸಿದ್ದಾರೆ. ಈ ವೇಳೆ ಗುಜರಾತ್ ಕಾಂಗ್ರೆಸ್ ಉಸ್ತುವಾರಿ ಮುಕುಲ್ ವಾಸ್ನಿಕ್, ರಾಜ್ಯ ಘಟಕದ ಅಧ್ಯಕ್ಷ ಶಕ್ತಿ ಸಿಂಗ್ ಗೋಹಿಲ್, ವಿರೋಧ ಪಕ್ಷದ ನಾಯಕ ಅಮಿತ್ ಚಾವ್ಡಾ ಮತ್ತು ಇತರರು ಉಪಸ್ಥಿತರಿದ್ದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌ ಹಾಗೂ ಎಎ‍ಪಿ ಜತೆಯಾಗಿ ಸ್ಪರ್ಧೆಸಲಿವೆ.

ಮಣಿಪುರದಿಂದ ಆರಂಭವಾಗಿರುವ ಈ ಯಾತ್ರೆಯು 14 ರಾಜ್ಯಗಳಲ್ಲಿ ಸಾಗಿ ಒಟ್ಟು 85 ಜಿಲ್ಲೆಗಳಲ್ಲಿ ಮೂಲಕ ಒಟ್ಟು 6,200 ಕಿ.ಮೀ. ಕ್ರಮಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT