ಜೊಮಾಟೊ ಸಂಸ್ಥಾಪಕ ಮತ್ತು ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಅವರು ಸಂದರ್ಶನದಲ್ಲಿ ಭಾಗಿಯಾಗಿದ್ದಾಗ ಅವರ ಹಣೆಯ ಎಡ ಬದಿಯಲ್ಲಿರುವ ಸಣ್ಣ ಲೋಹದ ಸಾಧನವೊಂದನ್ನು ಧರಿಸಿಕೊಂಡಿದ್ದರು. ಈ ಸಣ್ಣ ಸಾಧನ ಈಗ ಎಲ್ಲರಲ್ಲೂ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ದೀಪಿಂದರ್ ಗೋಯಲ್ ಅವರು ರಾಜ್ ಶಮಾನಿ ಅವರ ಫಿಗರಿಂಗ್ ಔಟ್ ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡಿದ್ದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ದೀಪಿಂದರ್ ಗೋಯಲ್ ತಮ್ಮ ಹಣೆಯ ಎಡ ಭಾಗದಲ್ಲಿ ಸಣ್ಣದೊಂದು ಸಾಧನವನ್ನು ಅಂಟಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸಂದರ್ಶನದ ವಿಡಿಯೊ ನೋಡಿದ ಕೆಲವರು ಟ್ರೋಲ್ ಮಾಡಿದರೆ, ಇನ್ನೂ ಕೆಲವರು ‘ಚೂಯಿಂಗ್ ಗಮ್ ಅಂಟಿಸಲು ಬಳಸಲಾಗುತ್ತದೆ’, ‘ಚಾರ್ಜಿಂಗ್ ಪ್ಯಾಡ್’ ಅಂತೆಲ್ಲಾ ಹಾಸ್ಯಭರಿತವಾಗಿ ಕಮೆಂಟ್ ಮಾಡಿದ್ದಾರೆ.
.ಮೆಟ್ರೊ ರೈಲಿನ ಮೇಲೆ ರಾಕಿಭಾಯ್ ಪೋಸ್ಟರ್: ಯಶ್ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ.Namma Metro ಗುಲಾಬಿ ಮಾರ್ಗ: ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ .
ಆದರೆ ನಿಜಕ್ಕೂ ಗೋಯಲ್ ಧರಿಸಿದ ಸಾಧನವೇನು? ಅದು ಹೇಗೆ ಕೆಲಸ ಮಾಡುತ್ತದೆ? ಎಂದು ಖುದ್ದು ದೀಪಿಂದರ್ ಗೋಯಲ್ ಅವರೇ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೀಪಿಂದರ್ ಗೋಯಲ್ ಅವರು ಹಣೆಯ ಎಡಬದಿಯಲ್ಲಿ ಅಂಟಿಕೊಂಡ ಸಾಧನದ ಹೆಸರು ಟೆಂಪಲ್ (Temple). ಇದು ಮೆದುಳಿನ ರಕ್ತದ ಹರಿವನ್ನು ನಿಖರವಾಗಿ, ನೈಜ ಸಮಯದಲ್ಲಿ ಮತ್ತು ನಿರಂತರವಾಗಿ ಅಳೆಯಲು ರೂಪಿಸಿರುವ ಪ್ರಾಯೋಗಿಕ ಸಾಧನ ಎಂದು ಬಣ್ಣಿಸಿದ್ದಾರೆ. ಇದನ್ನು ಅಳವಡಿಸಿಕೊಳ್ಳಲು ಮುಖ್ಯ ಕಾರಣ ಏನೆಂದರೆ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಈ ಸಾಧನ ಇನ್ನೂ ಗ್ರಾಹಕ ಗ್ಯಾಜೆಟ್ ಆಗಿಲ್ಲ, ಜೊಮಾಟೊ ಉತ್ಪನ್ನವೂ ಅಲ್ಲ, ಸಂಶೋಧನೆಗೆ ಮೂಲಮಾದರಿಯಾಗಿ ಇದೆ. ಇದರ ಬಗ್ಗೆ ಹಿಂದೆ ಬಹಳಷ್ಟು ಕೆಲಸ ನಡೆಯುತ್ತಿದೆ ಎಂದು ಒತ್ತಿ ಹೇಳಿದರು.

ಈ ಐಡಿಯಾ ಯಾವಾಗ ಮತ್ತು ಹೇಗೆ ಬಂತು?

ಗೋಯಲ್ ಅವರ ಪ್ರಕಾರ, ಟೆಂಪಲ್ ಸಾಧನದ ಕಲ್ಪನೆಯು ಪರಿಣಾಮಕಾರಿ ಪ್ರಯೋಗಗಳಿಂದ ಹೊರಹೊಮ್ಮಿತು. ವರ್ಷಗಳಲ್ಲಿ, ಇದರಲ್ಲಿ ರಕ್ತದ ಗುರುತುಗಳನ್ನು ಪತ್ತೆಹಚ್ಚುವುದು, ಉಪವಾಸ, ಧ್ಯಾನ ಇನ್ನಿತರ ದಿನಚರಿಗಳು, ಅಭ್ಯಾಸಗಳು ಸೇರಿವೆ.