ಜ.8 (ಗುರುವಾರ) ನಟ, ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸ್ನೇಹಿತರ ಬಳಗವೊಂದು ಯಶ್ ಅವರ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದೆ.
.ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು.ಹೊಸ ವರ್ಷಕ್ಕೆ ಹೊಸ ಸಿನಿಮಾಗಳು: ಕ್ಯೂನಲ್ಲಿವೆ ಯಶ್, ಸುದೀಪ್, ವಿಜಯ್ ಚಿತ್ರಗಳು.
ಅಭಿಮಾನಿಗಳ ನೆಚ್ಚಿನ ನಟ ಯಶ್ ಅವರ ಹುಟ್ಟಹಬ್ಬಕ್ಕೆ ಎರಡು ದಿನ ಬಾಕಿ ಉಳಿದಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಟ ಯಶ್ ಅವರ ಹೊಸ ಪೋಸ್ಟರ್ಗಳ ಅಬ್ಬರ ಜೋರಾಗಿದೆ. ಅಭಿಮಾನಿಗಳು ಯಶ್ ಅವರ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ಹುಟ್ಟುಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಶುಭ ಕೋರುತ್ತಿದ್ದಾರೆ.

ಈಗ ಅವರ ಗೆಳೆಯರ ಬಳಗ ಯಶ್ ಅವರಿಗೆ ಅಚ್ಚರಿ ಕೊಟ್ಟಿದೆ. ಅದೇನೆಂದರೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ನಮ್ಮ ಮೆಟ್ರೊದ ಮೇಲೆ ಯಶ್ ಅವರ ಕುರಿತು ಜಾಹೀರಾತು ನೀಡಿ, ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಕೋರಿದ್ದಾರೆ. ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿ ನಮ್ಮ ಮೆಟ್ರೊ ರೈಲಿನ ಮೇಲೆ ಯಶ್ ಅವರ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಈ ಮೆಟ್ರೊ ರೈಲು ಎಲ್ಲರ ಗಮನ ಸೆಳೆಯುತ್ತಿದೆ.

2024ರಲ್ಲಿ ಗದಗ ಜಿಲ್ಲೆಯ ಸುರಂಗ ಗ್ರಾಮದಲ್ಲಿ ನಟ ಯಶ್ ಹುಟ್ಟುಹಬ್ಬಕ್ಕೆ ಮುಂಚಿತವಾಗಿ 25 ಅಡಿ ಎತ್ತರದ ಕಟೌಟ್ ಅಳವಡಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ಇತರೆ ಮೂವರು ಗಾಯಗೊಂಡಿದ್ದ ಅವಘಡ ಸಂಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.