ಪೂರ್ಣಿಯಾ: 'ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆಸಲು ಬಿಜೆಪಿ ಯತ್ನಿಸುತ್ತಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಗುರುವಾರ) ಆರೋಪಿಸಿದ್ದಾರೆ.

'ಕಳೆದ ವರ್ಷ ಹರಿಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದ ಜೊತೆ ಸೇರಿಕೊಂಡು ಬಿಜೆಪಿ ಮತ ಕಳ್ಳತನ ನಡೆಸಿತ್ತು. ಈಗ ಬಿಹಾರದಲ್ಲೂ ಅದನ್ನೇ ನಡೆಸಲು ಯತ್ನಿಸುತ್ತಿದೆ' ಎಂದು ಅವರು ಟೀಕಿಸಿದ್ದಾರೆ.

'ರಾಜ್ಯದಲ್ಲಿ ಮತ ಕಳ್ಳತನ ತಡೆಯುವುದು ಹಾಗೂ ಸಂವಿಧಾನದ ರಕ್ಷಣೆ ಯುವಜನರ ಜವಾಬ್ದಾರಿಯಾಗಿದೆ. ಮತಗಟ್ಟೆಗಳಲ್ಲಿ ನೀವೆಲ್ಲರೂ ಎಚ್ಚರದಿಂದಿರಬೇಕು' ಎಂದು ರಾಹುಲ್ ಹೇಳಿದ್ದಾರೆ.

'ಕೋಟ್ಯಧಿಪತಿ ಉದ್ಯಮಿಗಳಿಗಾಗಿ ಯುವಜನರು ನಿರುದ್ಯೋಗಿಗಳಾಗಿ ಉಳಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ' ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧವೂ ಟೀಕಿಸಿದ ರಾಹುಲ್, 'ರಾಜ್ಯದ ಯುವಜನರನ್ನು ಕಾರ್ಮಿಕರನ್ನಾಗಿ ಪರಿವರ್ತಿಸಿದ್ದಾರೆ' ಎಂದು ಆರೋಪಿಸಿದ್ದಾರೆ.
.ನ್ಯಾಯಯುತವಾಗಿ ಚುನಾವಣೆ ನಡೆದರೆ ಎನ್ಡಿಎ ಸರ್ಕಾರ ಪತನ ಖಚಿತ: ಪ್ರಿಯಾಂಕಾ.ಹರಿಯಾಣದಲ್ಲೂ ಮತಗಳವು; ಕಾಂಗ್ರೆಸ್ ಜಯ ಕಸಿದುಕೊಂಡ ಬಿಜೆಪಿ: ರಾಹುಲ್ ಗಾಂಧಿ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.