ಪಟ್ನಾ: ಮುಖಗವಸು ಧರಿಸಿದ ಗ್ರಾಹಕರಿಗೆ ಚಿನ್ನಾಭರಣಗಳನ್ನು ಮಾರಾಟ ಮಾಡದಿರಲು ಬಿಹಾರದ ಆಭರಣ ಮಳಿಗೆ ಮಾಲೀಕರು ಬುಧವಾರ ನಿರ್ಧರಿಸಿದ್ದಾರೆ.

ಅಖಿಲ ಭಾರತ ಜ್ಯುವೆಲ್ಲರ್ಸ್ ಮತ್ತು ಗೋಲ್ಡ್ಸ್ಮಿತ್ ಫೆಡರೇಷನ್ನ (ಎಐಜೆಜಿಎಫ್) ರಾಜ್ಯ ಘಟಕವು ತನ್ನ ಸದಸ್ಯರಿಗೆ, ಮುಖಗವಸು ಧರಿಸಿ ಮಳಿಗೆಗಳಿಗೆ ಭೇಟಿ ನೀಡುವವರಿಗೆ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮಾಡದಿರುವಂತೆ ಹೇಳಿದೆ.

‘ಮುಖ ಮುಚ್ಚಿಕೊಂಡು ಅಂಗಡಿಯನ್ನು ಪ್ರವೇಶಿಸುವ ಗ್ರಾಹಕರ ಜೊತೆ ವ್ಯಾಪಾರ ಮಾಡದಿರಲು ನಿರ್ಧರಿಸಿದ್ದೇವೆ. ಹಿಜಾಬ್ ಧರಿಸಿದ ಮಹಿಳೆಯರೇ ಆಗಿರಲಿ ಅಥವಾ ಮುಖಗವಸು ಧರಿಸಿದ ಯಾವ ವ್ಯಕ್ತಿಗೂ ಚಿನ್ನಾಭರಣಗಳನ್ನು ಪ್ರದರ್ಶಿಸುವುದಿಲ್ಲ’ ಎಂದು ಎಐಜೆಜಿಎಫ್ನ ಬಿಹಾರ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ವರ್ಮಾ ಸುದ್ದಿಗಾರರಿಗೆ ತಿಳಿಸಿದರು.

‘ಕಳ್ಳತನ ತಡೆಗಟ್ಟಲಿಕ್ಕಾಗಿ, ಭದ್ರತೆಯ ಕಾರಣಗಳಿಗಾಗಿ ಹಾಗೂ ಆಭರಣಗಳ ವ್ಯಾಪಾರಿಗಳು ಮತ್ತು ಗ್ರಾಹಕರ ಸುರಕ್ಷತೆಗಾಗಿ’ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.