ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

17ನೇ ಲೋಕಸಭೆ ವಿಸರ್ಜನೆ: ವಿವಾಹ ವಯೋಮಿತಿ ಮಸೂದೆಗೆ ಚ್ಯುತಿ

Published 8 ಜೂನ್ 2024, 15:53 IST
Last Updated 8 ಜೂನ್ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಪುರುಷ ಮತ್ತು ಮಹಿಳೆಯರ ವಿವಾಹದ ವಯಸ್ಸಿನಲ್ಲಿ ಏಕರೂಪತೆ ತರುವ ಉದ್ದೇಶದಿಂದ ಮಂಡಿಸಲಾಗಿದ್ದ ಮಸೂದೆಯು 17ನೇ ಲೋಕಸಭೆ ವಿಸರ್ಜನೆಯೊಂದಿಗೆ, ಅಂಗೀಕಾರ ಪಡೆಯದೇ ಬಿದ್ದುಹೋಗಿದೆ.

‘ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ 2021’ ಅನ್ನು 2021ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಬಳಿಕ ಪರಿಶೀಲನೆಗಾಗಿ ಮಸೂದೆಯನ್ನು ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡಾ ವ್ಯವಹಾರ ಕುರಿತ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ಈ ಸ್ಥಾಯಿ ಸಮಿತಿಯ ಕಾಲಾವಧಿಯನ್ನು ಕೆಲವು ಬಾರಿ ವಿಸ್ತರಿಸಲಾಗಿತ್ತು.

‘ಇದೀಗ 17ನೇ ಲೋಕಸಭೆ ವಿಸರ್ಜನೆ ಆಗಿದೆ. ಈ ಅವಧಿಯಲ್ಲಿ ಅಂಗೀಕಾರ ಪಡೆಯಲಾಗದ ಕಾರಣಕ್ಕೆ ಈ ಮಸೂದೆಯೂ ಬಿದ್ದುಹೋದಂತಾಗಿದೆ’ ಎಂದು ಸಂವಿಧಾನ ತಜ್ಞರೂ ಆದ ಲೋಕಸಭಾ ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರ್ಯ ತಿಳಿಸಿದ್ದಾರೆ. 

ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸಲು ಬಾಲ್ಯ ವಿವಾಹ ನಿಷೇಧ ಕಾಯ್ದೆ–2006ರಕ್ಕೆ ತಿದ್ದುಪಡಿ ಮಾಡುವ ಉದ್ದೇಶವನ್ನು ಈ ಮಸೂದೆ ಹೊಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT