ಹ್ಯೂಸ್ಟನ್: ಭಾರತೀಯ ಅಮೆರಿಕನ್ ಉದ್ಯಮಿ ವಿನೋದ್ ಖೋಸ್ಲಾ ಅವರು ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಲು ₹74 ಕೋಟಿ (10 ಮಿಲಿಯನ್ ಡಾಲರ್) ನೀಡುವುದಾಗಿ ಭರವಸೆ ನೀಡಿದ್ದಾರೆ.

ವಿನೋದ್ ಖೋಸ್ಲಾ ಅವರು ಸನ್ ಮೈಕ್ರೋಸಿಸ್ಟಂನ ಸಹ ಸಂಸ್ಥಾಪಕರಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,‘ ನಾವು ಜೀವಗಳನ್ನು ಉಳಿಸಬೇಕಾಗಿದೆ. ಇದರಲ್ಲಿ ಸ್ವಲ್ಪವೂ ತಡವಾದರೆ ಇನ್ನಷ್ಟು ಮಂದಿ ಸಾವಿಗೀಡಾಗಬಹುದು. ಭಾರತದ ಹಲವು ಆಸ್ಪತ್ರೆಗಳು, ಸರ್ಕಾರೇತರ ಸಂಸ್ಥೆಗಳು ಪ್ರತಿನಿತ್ಯ 20,000 ಆಮ್ಲಜನಕ ಪೂರೈಕೆ ಪರಿಕರ, 15,000 ಆಮ್ಲಜನಕ ಸಿಲಿಂಡರ್‌ಗಳು, 500 ಐಸಿಯು ಹಾಸಿಗೆಗಳು, 100 ವೆಂಟಿಲೇಟರ್‌ಗಳು, ಕೋವಿಡ್ ಕೇಂದ್ರಗಳಿಗೆ 10,000 ಹಾಸಿಗೆಗಳನ್ನು ಪೂರೈಸುವಂತೆ ಮನವಿ ಮಾಡುತ್ತಿವೆ. ನಾವು ಭಾರತಕ್ಕೆ ಇನ್ನಷ್ಟು ಸಹಾಯ ಮಾಡಬೇಕು’ ಎಂದಿದ್ದಾರೆ.

‘ಭಾರತದ ತುರ್ತು ಅಗತ್ಯತೆಗಾಗಿ ಖೋಸ್ಲಾ ಕುಟುಂಬವು @GiveIndiaಗೆ ₹74 ಕೋಟಿ (10 ಮಿಲಿಯನ್ ಡಾಲರ್) ಅನ್ನು ನೀಡಲಿದೆ’ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.