ಬೆಂಗಳೂರು: ಲೆಗ್ ಸ್ಪಿನ್ನರ್ ವಂದಿತಾ ಕೆ. ರಾವ್ (17ಕ್ಕೆ 6) ಅವರ ಮೋಡಿಯ ನೆರವಿನಿಂದ ಕರ್ನಾಟಕ ತಂಡವು ಶುಕ್ರವಾರ ಬಿಸಿಸಿಐ 19 ವರ್ಷದೊಳಗಿವನ ಮಹಿಳೆಯರ ಏಕದಿನ ಕ್ರಿಕೆಟ್ ಟ್ರೋಫಿಯ ಪಂದ್ಯದಲ್ಲಿ 104 ರನ್ಗಳಿಂದ ಪಂಜಾಬ್ ತಂಡವನ್ನು ಮಣಿಸಿತು.

ಹೈದರಾಬಾದ್ನ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ಕಾರ್ಣಿಕಾ ಕಾರ್ತಿಕ್ (55;92ಎ) ಅವರ ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ಗೆ 199 ರನ್ ಗಳಿಸಿತು.

ಸಾಧಾರಣ ಮೊತ್ತದ ಗುರಿ ಪಡೆದ ಪಂಜಾಬ್ ತಂಡವು ವಂದಿತಾ ದಾಳಿಗೆ ಕುಸಿಯಿತು. 28.3 ಓವರ್ಗಳಲ್ಲಿ 95 ರನ್ ಗಳಿಸಿ ಹೋರಾಟವನ್ನು ಮುಗಿಸಿತು.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ: 50 ಓವರ್ಗಳಲ್ಲಿ 9 ವಿಕೆಟ್ಗೆ 199 (ಶ್ರೇಯಾ ಎಸ್.ಚವಾಣ್ 45, ಕಾರ್ಣಿಕಾ ಕಾರ್ತಿಕ್ 55, ವಂದಿತಾ ಕೆ.ರಾವ್ 32; ಹರ್ಮನ್ 32ಕ್ಕೆ 4, ಎಲೀಸ್ 17ಕ್ಕೆ 3).

ಪಂಜಾಬ್: 28.3 ಓವರ್ಗಳಲ್ಲಿ 95 (ವೇದಾ ವರ್ಷಿಣಿ 15ಕ್ಕೆ 2, ವಂದಿತಾ ಕೆ.ರಾವ್ 17ಕ್ಕೆ 6). ಫಲಿತಾಂಶ: ಕರ್ನಾಟಕಕ್ಕೆ 104 ರನ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.