ರಾಯಗಢ: ಛತ್ತೀಸಗಢದ ರಾಯಗಢದಲ್ಲಿ ಸರ್ಕಾರಿ ಪೌಲ್ಟ್ರಿ ಫಾರ್ಮ್ವೊಂದರಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದರಿಂದ 17,000 ಕೋಳಿ ಹಾಗೂ ಗೌಜುಗಗಳನ್ನು ಹತ್ಯೆ ಮಾಡಲಾಗಿದೆ.

ಚಕ್ರಧರ ನಗರದಲ್ಲಿರುವ ಫಾರ್ಮ್ನಲ್ಲಿ ಇತ್ತೀಚೆಗೆ ಕೆಲ ಕೋಳಿಗಳು ಸಾವಿಗೀಡಾಗಿದ್ದವು. ಅವುಗಳ ಮಾದರಿಯನ್ನು ಪರೀಕ್ಷೆಗಾಗಿ ಭೋಪಾಲ್ನಲ್ಲಿರುವ ಪ್ರಾಣಿ ರೋಗಗಳ ರಾಷ್ಟ್ರೀಯ ಸಂಸ್ಥೆಗೆ (ಎನ್ಐಎಚ್ಎಸ್ಎಡಿ) ರವಾನಿಸಲಾಗಿತ್ತು.

ಸಾವಿಗೀಡಾದ ಕೋಳಿಗಳಲ್ಲಿ ಎಚ್5ಎನ್1 ವೈರಸ್ ದೃಢಪಟ್ಟಿದೆ. ರೋಗ ಹರಡದಂತೆ ಹಕ್ಕಿ ಜ್ವರ ಕಾಣಿಸಿಕೊಂಡ ಪ್ರದೇಶದಿಂದ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಬಳಿಕ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಲಾಯಿತು. ಒಟ್ಟು 5,000 ಕೋಳಿ, 12,000 ಗೌಜುಗಗಳು ಹತ್ಯೆ ಮಾಡಲಾಗಿದೆ. ಇದರೊಂದಿಗೆ 17,000 ಮೊಟ್ಟೆಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.