ಇದರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅಣ್ಣಾಮಲೈ, ‘ಕಳೆದ ವಾರ ಡಿಎಂಕೆ ಕಾನೂನು ಸಚಿವ ಎಸ್.ರಘುಪತಿ ಅವರು ಭಗವಾನ್ ರಾಮ ಸಾಮಾಜಿಕ ನ್ಯಾಯದ ಚಾಂಪಿಯನ್, ಜಾತ್ಯತೀತತೆಯ ಪ್ರವರ್ತಕ ಎಂದಿದ್ದರು. ಇದೀಗ ಡಿಎಂಕೆಯ ಇನ್ನೊಬ್ಬ ಸಚಿವ ರಾಮ ಅಸ್ತಿತ್ವದಲ್ಲೇ ಇರಲಿಲ್ಲ ಎನ್ನುತ್ತಾರೆ’ ಎಂದು ಕುಟುಕಿದ್ದಾರೆ.
‘ಹಠಾತ್ ಆಗಿ ಶ್ರೀರಾಮನ ಬಗ್ಗೆ ಡಿಎಂಕೆ ನಾಯಕರು ಆಸಕ್ತಿ ಬೆಳಸಿಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಇದನ್ನು ಯಾರು ಯೋಚಿಸಿದ್ದರು?’ ಎಂದು ಲೇವಡಿ ಮಾಡಿದ್ದಾರೆ.
‘ಇದು ಸರಿಯಾದ ಸಮಯವಾಗಿದ್ದು, ಶ್ರೀರಾಮನ ಅಸ್ತಿತ್ವದ ಕುರಿತು ಕುಳಿತು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕಿದೆ’ ಎಂದು ಸಚಿವರಾದ ಎಸ್.ರಘುಪತಿ ಮತ್ತು ಎಸ್.ಎಸ್. ಶಿವಶಂಕರ್ ಅವರಿಗೆ ಸಲಹೆ ನೀಡಿದ್ದಾರೆ.