ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣವು ಮನೀಷ್ ಸಿಸೋಡಿಯಾ ಅವರಲ್ಲಿಗೆ ನಿಂತು ಹೋಗುವುದಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೂ ಇದರೊಂದಿಗೆ ನಂಟಿದೆ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ.

ದೆಹಲಿಯ ನ್ಯಾಯಾಲಯವು ಸಿಸೋಡಿಯಾ ಅವರ ಜಾಮೀನು ಅರ್ಜಿ ತಳ್ಳಿಹಾಕಿರುವುದನ್ನು ಉಲ್ಲೇಖಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ‘ಕೇಜ್ರಿವಾಲ್ ಮತ್ತು ಮಾನ್ ಅವರ ಭ್ರಷ್ಟಾಚಾರದ ಪದವಿ ಬಹಿರಂಗಗೊಂಡಿದೆ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಕುರಿತು ಕೇಜ್ರಿವಾಲ್ ಅವರು ಟೀಕಿಸಿದ ಬಳಿಕ ಪೂನಾವಾಲಾ ಅವರ ಈ ಹೇಳಿಕೆ ಹೊರಬಿದ್ದಿದೆ.

‘ಲಂಚ ನೀಡಿರುವುದು ದೃಢಪಟ್ಟಿದೆ’ ಎಂದು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿರುವ ಹೇಳಿಕೆಯನ್ನೂ ಪೂನಾವಾಲ ಅವರು ಉಲ್ಲೇಖಿಸಿದರು.

‘ವಿವಾದಾತ್ಮಕ ಅಬಕಾರಿ ನೀತಿಯನ್ನು ಕೇಜ್ರಿವಾಲ್ ಅವರ ಮಟ್ಟದಲ್ಲೇ ರೂಪಿಸಲಾಗಿದೆ’ ಎಂದೂ ಆರೋಪಿಸಿದ್ದಾರೆ.

ಪಂಜಾಬ್‌ನ ಅಬಕಾರಿ ಇಲಾಖೆಯನ್ನು ಬಳಸಿಕೊಂಡು ಮದ್ಯದ ಸಗಟು ವ್ಯಾಪಾರಿಯೊಬ್ಬರನ್ನು ತಮ್ಮ ಪರವಾನಗಿಯನ್ನು ಒಪ್ಪಿಸುವಂತೆ ಒತ್ತಾಯಿಸಲಾಗಿದೆ ಎಂದೂ ಮಾನ್ ಅವರನ್ನು ಗುರಿಯಾಗಿಸಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.