ಭಾಂಗರ್, ಪಶ್ಚಿಮ ಬಂಗಾಳ: ‘ಬಿಜೆಪಿಯು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋತರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹತ್ಯೆಗೆ ಮುಂದಾಗಬಹುದು. ರಾಜ್ಯದಲ್ಲಿ ಅಪರಾಧ ಕೃತ್ಯಗಳನ್ನು ನಡೆಸಲು ಆ ಪಕ್ಷವು ಹೊರಗಿನಿಂದ ಜನರನ್ನು ಕರೆಸುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಿರಿಯ ಮುಖಂಡ ಸುಬ್ರತಾ ಮುಖರ್ಜಿ ಆರೋಪಿಸಿದ್ದಾರೆ.

‘ರಾಜ್ಯದ ಕೋಟ್ಯಂತರ ಮಂದಿ ಮಮತಾ ಅವರನ್ನು ತಾಯಿ ಎಂದು ಪೂಜಿಸುತ್ತಿದ್ದಾರೆ. ಅವರಿಗೆ ಏನಾದರೂ ತೊಂದರೆಯಾದರೆ ಅದನ್ನು ತಡೆಯಲು ನಾವು ರಕ್ತ ಹರಿಸಲೂ ಸಿದ್ಧರಿದ್ದೇವೆ’ ಎಂದು ಪಂಚಾಯತ್ ರಾಜ್ ಸಚಿವರೂ ಆಗಿರುವ ಸುಬ್ರತಾ ನುಡಿದಿದ್ದಾರೆ.

‘ಮಮತಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಅವರನ್ನು ರಹಸ್ಯವಾಗಿ ಹತ್ಯೆ ಮಾಡಲು ಸಂಚು ರೂಪಿಸುತ್ತಿದೆ. ಹೊರಗಿನಿಂದ ಜನರನ್ನು ಕರೆಸಿ ಪಶ್ಚಿಮ ಬಂಗಾಳದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದೆ. ತಾನು ಕೃತ್ಯವೆಸಗಿ ಬೇರೆಯವರ ಮೇಲೆ ಆಪಾದನೆ ಹೊರಿಸಲು ಮುಂದಾಗಿದೆ. ಅವರ ಈ ನಾಟಕ ಹೆಚ್ಚು ಕಾಲ ಉಳಿಯುವುದಿಲ್ಲ. ಅದಕ್ಕೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಾರಿನ ಮೇಲೆ ನಡೆದ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಅವರು ‘ಘಟನೆಯ ಬಳಿಕ ನಮ್ಮವರು ತನಿಖೆ ನಡೆಸಿದ್ದಾರೆ. ಬಿಜೆಪಿಯವರೇ ಜನರನ್ನು ಬಿಟ್ಟು ನಡ್ಡಾ ಅವರ ಕಾರಿನ ಮೇಲೆ ಕಲ್ಲು ತೂರಿಸಿದ್ದಾರೆ’ ಎಂದೂ ಅವರು ದೂರಿದ್ದಾರೆ.

ಸುಬ್ರತಾ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ‘ಸುಬ್ರತಾ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.