ನವದೆಹಲಿ: ರೈತರು ನಡೆಸಿದ ಪ್ರತಿಭಟನೆ ಕುರಿತು ಹೇಳಿಕೆ ನೀಡಿದ್ದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ, ನಟಿ ಕಂಗನಾ ರನೌತ್ ಅವರ ಪ್ರತಿಕ್ರಿಯೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ.
ರೈತರ ಧರಣಿಯು ಬಾಂಗ್ಲಾದೇಶ ಮಾದರಿಯ ಪರಿಸ್ಥಿತಿಯನ್ನು ಭಾರತದಲ್ಲಿ ಸೃಷ್ಟಿಸುವ ಹುನ್ನಾರವಾಗಿತ್ತು ಎಂದು ಕಂಗನಾ ಆರೋಪಿಸಿದ್ದರು.
ಸಂಸದೆಯ ಹೇಳಿಕೆ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ‘ಸಂಸದರ ರೈತ ವಿರೋಧಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ನೀತಿಗಳ ಕುರಿತು ಹೇಳಿಕೆ ನೀಡಲು ಕಂಗನಾ ಅವರಿಗೆ ಯಾವುದೇ ಅಧಿಕಾರವಿಲ್ಲ’ ಎಂದು ಸ್ಪಷ್ಟಪಡಿಸಿದೆ.