ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಭ್ಯರ್ಥಿ ಆಯ್ಕೆ: ಟಿಡಿಪಿ, ಜನಸೇನಾ, ಬಿಜೆಪಿ ಮುಖಂಡರ ಚರ್ಚೆ

Published 11 ಮಾರ್ಚ್ 2024, 14:28 IST
Last Updated 11 ಮಾರ್ಚ್ 2024, 14:28 IST
ಅಕ್ಷರ ಗಾತ್ರ

ಅಮರಾವತಿ, ಆಂಧ್ರಪ್ರದೇಶ:  ಬಿಜೆಪಿ ನಾಯಕರು ಸೋಮವಾರ ಇಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್ ಅವರನ್ನು ಭೇಟಿಯಾಗಿದ್ದು, ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಎನ್‌ಎಡಿ ಮೈತ್ರಿಕೂಟದ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಿದರು.

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಅವರು ಉಭಯ ನಾಯಕರನ್ನು ಭೇಟಿಯಾಗಿದ್ದರು ಎಂದು ಟಿಡಿಪಿ ಮೂಲಗಳು ತಿಳಿಸಿವೆ.

ಈಗಾಗಲೇ ಅಂತಿಮಗೊಂಡಂತೆ ಕ್ಷೇತ್ರಗಳ ಸಂಖ್ಯೆ ನಿಗದಿಯಾಗಿದೆ. ಈಗ ಮೈತ್ರಿಪಕ್ಷಗಳು ಸ್ಪರ್ಧಿಸಬೇಕಾದ ಕ್ಷೇತ್ರಗಳ ಚರ್ಚೆ ನಡೆದಿದೆ. ಚರ್ಚೆ ಪ್ರಕಾರ, ಬಿಜೆಪಿ ಲೋಕಸಭೆಯ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಯಾವ ಕ್ಷೇತ್ರ  ಮತ್ತು ಯಾರು ಸ್ಪರ್ಧಿಸಬೇಕು ಎಂಬುದನ್ನು ಆ ಪಕ್ಷದ ಮುಖಂಡರು ಅಂತಿಮಗೊಳಿಸುವರು ಎಂದು ವಿವರಿಸಿವೆ.

ಮೈತ್ರಿ ಪ್ರಕಾರ, ಬಿಜೆಪಿ ತಲಾ ಆರು ಲೋಕಸಭೆ, ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಜನಸೇನಾ ಪಕ್ಷ ವಿಧಾನಸಭೆಯ 24, ಲೋಕಸಭೆಯ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಟಿಡಿಪಿಯು ವಿಧಾನಸಭೆಯ 145, ಲೋಕಸಭೆಯ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಆಂಧ್ರದಲ್ಲಿ ಲೋಕಸಭೆಯ 25 ಕ್ಷೇತ್ರಗಳು, ವಿಧಾನಸಭೆಯ 175 ಕ್ಷೇತ್ರಗಳಿವೆ.

ಮಾರ್ಚ್‌ 17–20ರ ಅವಧಿಯಲ್ಲಿ ಆಂಧ್ರದಲ್ಲಿ ಚುನಾವಣಾ ಸಾರ್ವಜನಿಕ ಸಮಾವೇಶ ನಡೆಯಲಿದ್ದು, ಆ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT