ರಾಯ್‌ಬರೇಲಿ: ಸಾಮಾನ್ಯ ಜನರ ಸೇವೆ ಮಾಡಬೇಕೆಂಬ ‘ರಾಜ ಧರ್ಮ’ವನ್ನು ಬಿಜೆಪಿ ಮರೆತಿದೆ. ಕೇವಲ ದೊಡ್ಡ ಉದ್ಯಮಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

ರಾಯ್‌ಬರೇಲಿಯ ಜಗತ್‌ಪುರದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಗಳನ್ನು ಪಡೆಯುವುದಕ್ಕಾಗಿ ಧರ್ಮ ಮತ್ತು ಜಾತಿಯನ್ನು ಬಳಸುವವರನ್ನು ಜನರು ಗಮನಿಸಬೇಕು ಎಂದರು.

ಸಮಾಜವಾದಿ ಪಕ್ಷಕ್ಕೆ ಭಯೋತ್ಪಾದಕರ ಬಗ್ಗೆ ಸಹಾನುಭೂತಿ: ಯೋಗಿ ಆದಿತ್ಯನಾಥ್ ಆರೋಪ

ಬಿಜೆಪಿ ನಾಯಕರು ಜನರ ಸೇವೆ ಮಾಡುವುದು ತಮ್ಮ ಧರ್ಮ ಎಂಬುದನ್ನು ಮರೆತಿದ್ದಾರೆ. ಅವರಿಗೆ ಧರ್ಮ ಎಂಬುದು ಮತ ಗಳಿಕೆಗಾಗಿ ಜನರನ್ನು ಪ್ರಚೋದಿಸುವ ತಂತ್ರವಾಗಿಬಿಟ್ಟಿದೆ. ಬಿಜೆಪಿ ಸರ್ಕಾರವು ಜನರ ಸೇವೆ ಮಾಡಬೇಕೆಂಬ ರಾಜ ಧರ್ಮವನ್ನು ಮರೆತಿದೆ ಎಂದು ಅವರು ಟೀಕಿಸಿದ್ದಾರೆ.

ನಿರುದ್ಯೋಗ, ಹಣದುಬ್ಬರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಅಡುಗೆ ಅನಿಲದ ಸಿಲಿಂಡರ್ ಮತ್ತು ಸಾಸಿವೆ ಎಣ್ಣೆ ಬೆಲೆ ಏರಿಕೆ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ದಂಗೆ, ಸುಲಿಗೆಗಳಿಂದ ಉತ್ತರ ಪ್ರದೇಶಕ್ಕೆ ಮುಕ್ತಿ ಕೊಡಿಸಿದ ಬಿಜೆಪಿ: ಪ್ರಧಾನಿ ಮೋದಿ

‘ನೀವು ದಿನಕ್ಕೆ ₹200 ಸಂಪಾದಿಸಿದರೆ ಒಂದು ಬಾಟಲ್ ಸಾಸಿವೆ ಎಣ್ಣೆಗೆ ₹240 ನೀಡಬೇಕಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.