ರಾಯಪುರ: ವಿವಿಧ ಯೋಜನೆಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿವಾಜಪೇಯಿ ಹೆಸರು ಇಡುವ ಸರ್ಕಾರದ ನಿರ್ಧಾರಕ್ಕೆ ವಾಜಪೇಯಿ ಅವರ ಅಣ್ಣನ ಮಗಳು ಕರುಣಾ ಶುಕ್ಲಾ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ,ನಯಾ ರಾಯಪುರಕ್ಕೆ ‘ಅಟಲ್ ನಗರ್’, ನ್ಯಾರೊ ಗೇಜ್ ಎಕ್ಸ್‌ಪ್ರೆಸ್– ವೇಗೆ ‘ಅಟಲ್ ಪಥ’, ನಯಾ ರಾಯಪುರದಲ್ಲಿ ವಾಜಪೇಯಿ ಪ್ರತಿಮೆ ಅನಾವರಣ, ಪಠ್ಯ ಪುಸ್ತಕಗಳಲ್ಲಿ ವಾಜಪೇಯಿ ಜೀವನ, ಚಿಂತನೆ ಅಳವಡಿಕೆ, ವಾಜಪೇಯಿ ಹೆಸರಿನಲ್ಲಿ ಉತ್ತಮ ಆಡಳಿತಗಾರರಿಗೆ ಪ್ರಶಸ್ತಿ, ವಾಜಪೇಯಿ ಅವರ ಹುಟ್ಟು ಹಬ್ಬದಂದು ಕವಿಗಳಿಗೆ ಸನ್ಮಾನ ಸೇರಿದಂತೆ ಹಲವು ಯೋಜನೆಗಳಲ್ಲಿ ಅವರ ಹೆಸರು ಬಳಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಸರ್ಕಾರಿ ಯೋಜನೆಗಳಿಗೆ ಗಣ್ಯರ ಹೆಸರು ಇಡುವುದನ್ನು ಸ್ವತಹವಾಜಪೇಯಿ ಅವರೇ ಒಪ್ಪುತ್ತಿರಲಿಲ್ಲ.‘ಗ್ರಾಮೀಣ ಸಡಕ್ ಯೋಜನೆ’ಗೆಅಟಲ್ ಹೆಸರನ್ನೇ ಇಡುವಂತೆಬಿಜೆಪಿಯ ಹಲವಾರು ಮುಖಂಡರು ವಾಜಪೇಯಿ ಅವರ ಬಳಿ ಕೇಳಿಕೊಂಡಿದ್ದಾಗಲೂ ಒಪ್ಪಿರಲಿಲ್ಲವಂತೆ. ಕೊನೆಗೆ,ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಎಂದು ನಾಮಕರಣ ಮಾಡಲು ಸೂಚಿಸಿದ್ದರಂತೆ.

ಇದನ್ನೂ ಓದಿ...

*ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯ ಜನಕ ಅಟಲ್ಜೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.