ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಢ ಮಹಾನಗರ ಪಾಲಿಕೆ: ಹಿರಿಯ ಉಪ ಮೇಯರ್‌, ಉಪ ಮೇಯರ್‌ ಸ್ಥಾನ ಬಿಜೆಪಿಗೆ

Published 4 ಮಾರ್ಚ್ 2024, 13:23 IST
Last Updated 4 ಮಾರ್ಚ್ 2024, 13:23 IST
ಅಕ್ಷರ ಗಾತ್ರ

ಚಂಡೀಗಢ: ಚಂಡೀಗಢ ಮಹಾನಗರ ಪಾಲಿಕೆಯ ಹಿರಿಯ ಉಪ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿಯ ಕುಲ್ದೀಪ್‌ ಸಿಂಗ್‌ ಸಂಧು ಮತ್ತು ರಾಜೀಂದರ್‌ ಶರ್ಮಾ ಅವರು ಗೆಲುವು ಸಾಧಿಸಿದ್ದಾರೆ.

ಹಿರಿಯ ಉಪ ಮೇಯರ್‌ ಆಗಿ ಚುನಾಯಿತರಾದ ಸಂಧು ಮತ್ತು ಉಪ ಮೇಯರ್‌ ರಾಜೀಂದರ್‌ ಶರ್ಮಾ ತಲಾ 19 ಮತಗಳನ್ನು ಪಡೆದಿದ್ದಾರೆ. 

ಕಾಂಗ್ರೆಸ್‌ ಅಭ್ಯರ್ಥಿಗಳಾದ ಗುರ್‌ಪ್ರೀತ್‌ ಗಾಬಿ ಮತ್ತು ನಿರ್ಮಲಾ ದೇವಿ ಅವರು ಕ್ರಮವಾಗಿ 16 ಮತ್ತು 17 ಮತ ಪಡೆದಿದ್ದಾರೆ. ಹಿರಿಯ ಉಪ ಮೇಯರ್‌ ಚುನಾವಣೆಯಲ್ಲಿ ಒಂದು ಮತವನ್ನು ಅಮಾನ್ಯ ಮಾಡಲಾಗಿದೆ. 35 ಸದಸ್ಯ ಬಲದ ಚಂಡೀಗಢ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17 ಸದಸ್ಯರ ಬಲವನ್ನು ಹೊಂದಿದೆ. ಶಿರೋಮಣಿ ಅಕಾಲಿ ದಳದ ಒಬ್ಬ ಸದಸ್ಯ ಮತ್ತು ಸ್ಥಳೀಯ ಸಂಸದರ ಮತ ಸೇರಿ ಒಟ್ಟು 19 ಮತಗಳನ್ನು ಬಿಜೆಪಿ ಅಭ್ಯರ್ಥಿಗಳು ಪಡೆದರು.

ಜನವರಿ 30ರಂದು ನಡೆದ ಚಂಡೀಗಢ ಮೇಯರ್‌ ಚುನಾವಣೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್‌ ಫೆಬ್ರುವರಿ 20ರಂದು ರದ್ದುಪಡಿಸಿತ್ತು. ಅಲ್ಲದೆ ಎಎಪಿ–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT