ಆಗ್ರಾ (ಉತ್ತರಪ್ರದೇಶ): ಇಲ್ಲಿನ ವಿಮಾನ ನಿಲ್ದಾಣಕ್ಕೆ ಇ–ಮೇಲ್ ಮೂಲಕ ಸೋಮವಾರ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಭದ್ರತಾ ಪಡೆ ಸಿಬ್ಬಂದಿ ತಕ್ಷಣವೇ ಶೋಧ ಕಾರ್ಯ ನಡೆಸಿದರು. ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.

ಖೇರಿಯಾದಲ್ಲಿರುವ ವಿಮಾನ ನಿಲ್ದಾಣವು ನಾಗರಿಕ ವಿಮಾನಯಾನ ಸೇವೆ ಒದಗಿಸುವ ಜೊತೆಗೆ ಬಾರತೀಯ ವಾಯುಪಡೆಯ ವಾಯುನೆಲೆಯಾಗಿದೆ.

‘ವಿಮಾನ ನಿಲ್ದಾಣದ ಸ್ನಾನದ ಕೊಠಡಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಸೋಮವಾರ ಬೆಳಿಗ್ಗೆ 11.56ರ ಸುಮಾರಿಗೆ ವಿಮಾನ ನಿಲ್ದಾಣದ ಭದ್ರತಾ ಉಸ್ತುವಾರಿ ಹೊಂದಿರುವ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ಇ–ಮೇಲ್ ಮಾಡಲಾಗಿತ್ತು. ತಕ್ಷಣವೇ ಬಾಂಬ್ ನಿಷ್ಕ್ರಿಯ ತಂಡವನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು’ ಎಂದು ಸಹಾಯಕ ಆಯುಕ್ತ (ಲೋಹಮಂಡಿ) ಮಾಯಂಕ್ ತಿವಾರಿ ತಿಳಿಸಿದರು.

‘ಸುಮಾರು 2 ಗಂಟೆಗಳ ಕಾಲ ವಿಮಾನ ನಿಲ್ದಾಣ ಶೋಧಿಸಿದ ಬಳಿಕ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’ ಎಂದು ಆಗ್ರಾ ವಿಮಾನನಿಲ್ದಾಣದ ನಿರ್ದೇಶಕ ಯೋಗೇಂದ್ರ ಸಿಂಗ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.