ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ: ಮಹಿಳೆಯ ಎರಡೂ ಕಿಡ್ನಿ ತೆಗೆದರು!

ಆರೋಪಿಗಳ ಬಂಧನಕ್ಕೆ ಮೂರು ತಂಡ ರಚಿಸಿದ ಪೊಲೀಸರು
Last Updated 24 ಸೆಪ್ಟೆಂಬರ್ 2022, 15:39 IST
ಅಕ್ಷರ ಗಾತ್ರ

ಪಟ್ನಾ/ಮುಜಾಫರ್‌ಪುರ: ಮುಜಾಫರ್‌ಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯ ಎರಡೂ ಮೂತ್ರಪಿಂಡಗಳನ್ನೂ (ಕಿಡ್ನಿ) ತೆಗೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಆಸ್ಪತ್ರೆ ಮಾಲೀಕರು ಮತ್ತು ವೈದ್ಯರ ಬಂಧನಕ್ಕೆ ಬಿಹಾರ ಪೊಲೀಸರು ಮೂರು ವಿಶೇಷ ತಂಡ ರಚನೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೂವರು ಮಕ್ಕಳ ತಾಯಿ ಸುನಿತಾ ದೇವಿ ಎಂಬುವವರ ಕಿಡ್ನಿ ತೆಗೆದಿದ್ದು, ಸೆ.15ರಿಂದ ಸಂತ್ರಸ್ತೆಗೆ ಪಟನಾ ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಐಜಿಐಎಂಎಸ್‌) ಚಿಕಿತ್ಸೆ ನೀಡಲಾಗುತ್ತಿದೆ.ಸುನಿತಾ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಹಿಳೆ ಸೆ.3ರಂದು ಇಲ್ಲಿನ ಅನಧಿಕೃತ ಶುಭಕಂಠ್‌ ಕ್ಲಿನಿಕ್‌ನಲ್ಲಿ ಗರ್ಭಕೋಶ ತೆಗೆಯುವ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಅವರ ಎರಡೂ ಕಿಡ್ನಿ ತೆಗೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇದನ್ನು ಖಚಿತಪಡಿಸಲು ಇನ್ನೂ ಹೆಚ್ಚಿನ ಪರೀಕ್ಷೆ ನಡೆಸಬೇಕು ಎಂದು ಐಜಿಐಎಂಎಸ್‌ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT