ಕೋಯಿಕ್ಕೋಡ್: ಮಿದುಳು ಸೋಂಕಿನಿಂದ (ಅಮೀಬಿಕ್ ಎನ್ಸೆಫಲಿಟಿಸ್) ಉತ್ತರ ಕೇರಳದ ಜಿಲ್ಲೆಯೊಂದರ ಒಂಬತ್ತು ವರ್ಷದ ಬಾಲಕಿಯೊಬ್ಬಳು ಎರಡು ದಿನದ ಹಿಂದೆ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಆಗಸ್ಟ್ 13ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದರಿಂದ 14ರಂದೇ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆಕೆ ಅದೇ ದಿನ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಶುಕ್ರವಾರ ರಾತ್ರಿ ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯ ಸಾವಿಗೆ ಮಿದುಳು ಸೋಂಕು ಕಾರಣ ಎಂಬುದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

‘ತಾಮರಸ್ಸೇರಿಯ ಬಾಲಕಿಗೆ ಮಾರಣಾಂತಿಕ ಸೋಂಕು ತಗುಲಿದ ಜಲಮೂಲವನ್ನು ಗುರುತಿಸಲು ಶೋಧ ನಡೆಸಲಾಗುತ್ತಿದೆ. ಅದು ಪತ್ತೆಯಾಗುತ್ತಿದ್ದಂತೆ, ಈಚೆಗೆ ಅದರಲ್ಲಿ ಸ್ನಾನ ಮಾಡಿದವರನ್ನು ಹುಡುಕುತ್ತೇವೆ’ ಎಂದು ಅವರು ಹೇಳಿದರು.

ಪ್ರಸಕ್ತ ವರ್ಷದಲ್ಲಿ ಈ ಜಿಲ್ಲೆಯಲ್ಲೇ ವರದಿಯಾದ ಅಪರೂಪದ ಮಿದುಳು ಸೋಂಕಿನ ನಾಲ್ಕನೇ ಪ್ರಕರಣವಿದು. ಕಲುಷಿತ ನೀರಿನಲ್ಲಿ ಕಂಡುಬರುವ ಅಮೀಬಾದಿಂದ ಈ ಸೋಂಕು ತಗುಲುತ್ತದೆ ಎಂದು ಮಾಹಿತಿ ನೀಡಿದರು.
.ಆಳ–ಅಗಲ | ‘ದೇವರ ನಾಡ’ಲ್ಲಿ ಆತಂಕ ತಂದ ‘ಮಿದುಳು ತಿನ್ನುವ ಅಮೀಬಾ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.