ಹರ್ದೋಯಿ (ಉತ್ತರ ಪ್ರದೇಶ): ಸಾಮೂಹಿಕ ವಿವಾಹ ಯೋಜನೆಯಡಿ ವಧುವಿಗೆ ‘ಸಿಂದೂರ ದಾನಿ’ಯ ಉಡುಗೊರೆ ನೀಡಲಾಗುವುದು ಎಂದು ಉತ್ತರ ಪ್ರದೇಶದ ಸಮಾಜ ಕಲ್ಯಾಣ ಸಚಿವ ಅಸೀಮ್ ಅರುಣ್ ಬುಧವಾರ ಪ್ರಕಟಿಸಿದರು.

‘ಉಡುಗೊರೆಯು ಆರ್ಥಿಕ ಮೌಲ್ಯದಲ್ಲಿ ಸಣ್ಣದಾಗಿದ್ದರೂ, ವಿವಾಹದಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರೂಪಿಸಿರುವ ‘ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ’ಯು ಸಂಪ್ರದಾಯ ಮತ್ತು ಮಹಿಳೆಯರ ಘನತೆ ಹೆಚ್ಚಿಸುವಲ್ಲಿ ರಾಜ್ಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ ಎಂದಿದ್ದಾರೆ.

ಯೋಜನೆಯಡಿ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ₹51 ಸಾವಿರದಿಂದ ₹1 ಲಕ್ಷಕ್ಕೆ ಈಚೆಗಷ್ಟೇ ಹೆಚ್ಚಿಸಲಾಗಿದೆ ಎಂದು ಅರುಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.