ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು | ನೌಶರಾ ಸುರಂಗ ಕೊರೆಯುವ ಕೆಲಸ ಪೂರ್ಣ

Published 28 ಜನವರಿ 2024, 16:18 IST
Last Updated 28 ಜನವರಿ 2024, 16:18 IST
ಅಕ್ಷರ ಗಾತ್ರ

ಜಮ್ಮು: 700 ಮೀಟರ್‌ ಉದ್ದದ ನೌಶೆರಾ ಸುರಂಗ ಕೊರೆಯುವ ಕೆಲಸವನ್ನು ಗಡಿ ರಸ್ತೆ ಸಂಸ್ಥೆಯು (ಬಿಆರ್‌ಒ) ಭಾನುವಾರ ಯಶಸ್ವಿಯಾಗಿ ಪೂರೈಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದಕ್ಷಿಣ ಕಾಶ್ಮೀರವನ್ನು ಮತ್ತು ಉತ್ತರ ಕಾಶ್ಮೀರದ ಜೊತೆ ಸಂಪರ್ಕಿಸುವ ಪ್ರಮುಖ ಹೆದ್ದಾರಿ ‘ಗೋಲ್ಡನ್‌ ಆರ್ಕ್‌ ರಸ್ತೆ’ಯ ಭಾಗವಾಗಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಈ ಮಾರ್ಗವು ಜಮ್ಮುವಿನ ಅಖ್ನೂರ್ ಮತ್ತು ಪೂಂಚ್‌ ಜಿಲ್ಲೆಯನ್ನು ಸಂಪರ್ಕಿಸುತ್ತದೆ.

ಸುರಂಗ ಕೊರೆಯಲು ಸ್ಫೋಟಕಗಳನ್ನು ಬಳಸಲಾಯಿತು. ಬಿಆರ್‌ಒ ಪ್ರಧಾನ ನಿರ್ದೇಶಕ ಲೆಫ್ಟಿನಂಟ್ ಜನರಲ್‌ ರಘು ಶ್ರೀನಿವಾಸನ್ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.

ನೌಶೆರಾ ಸುರಂಗವಲ್ಲದೇ ಇನ್ನೂ ಮೂರು ಸುರಂಗ ಮಾರ್ಗಗಳನ್ನು ಗೋಲ್ಡನ್‌ ಆರ್ಕ್‌ ಹೆದ್ದಾರಿ ಭಾಗವಾಗಿನಿರ್ಮಾಣ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT