ಕೋಲ್ಕತ್ತ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ವೇದ್ ಪ್ರಕಾಶ್ ಅವರನ್ನು ಬಾಂಗ್ಲಾದೇಶದ ಜಾನುವಾರು ಕಳ್ಳಸಾಗಣೆದಾರರು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಳ್ಳಸಾಗಣೆದಾರರ ಬೆನ್ನುಹತ್ತಿ ಹೋಗುವ ವೇಳೆ ಅವರು ಗಡಿ ದಾಟಿದ್ದು, ಈ ವೇಳೆ ಅಪಹರಣಕ್ಕೆ ಒಳಗಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲೆಯ ಮೇಖ್ಲಿಗಂಜ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಭಾರತೀಯ ಬಿಎಸ್ಎಫ್ ಅಧಿಕಾರಿಗಳು, ಬಾಂಗ್ಲಾದೇಶ ಗಡಿ ಭದ್ರತಾ ಪಡೆ (ಬಿಜಿಬಿ) ಜೊತೆ ಈ ವಿಷಯದ ಬಗ್ಗೆ ಮಾತನಾಡಿದ ನಂತರ ಅವರು ಸಂಜೆ ಶಿಬಿರಕ್ಕೆ ಮರಳಿದರು ಎಂದು ಹೇಳಿದ್ದಾರೆ.

ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ನಂತರ ಈ ವಿಷಯವನ್ನು ಬಿಜಿಬಿಗೆ ತಿಳಿಸಲಾಯಿತು ಎಂದು ಬಿಎಸ್ಎಫ್ ಅಧಿಕಾರಿ ಹೇಳಿದರು.

ಬಿಎಸ್ಎಫ್ ಮತ್ತು ಬಿಜಿಬಿ ಅಧಿಕಾರಿಗಳ ನಡುವಿನ ಸಭೆಗಳ ನಂತರ, ಪ್ರಕಾಶ್ ಸಂಜೆ ಸುರಕ್ಷತವಾಗಿ ತಮ್ಮ ಶಿಬಿರಕ್ಕೆ ಮರಳಿದರು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.