ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿಯಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ: ಬಿಎಸ್‌ಎಫ್‌ ಯೋಧ ಹುತಾತ್ಮ

Published : 9 ನವೆಂಬರ್ 2023, 3:17 IST
Last Updated : 9 ನವೆಂಬರ್ 2023, 3:17 IST
ಫಾಲೋ ಮಾಡಿ
Comments

ಜಮ್ಮು: ಇಲ್ಲಿನ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಗುರುವಾರ ಮುಂಜಾನೆ ‍‍‍ಪಾಕಿಸ್ತಾನ ರೇಂಜರ್ಸ್‌ನ ಅಪ್ರಚೋದಿತ ದಾಳಿಯಲ್ಲಿ ಓರ್ವ ಬಿಎಸ್‌ಎಫ್‌ ಯೋಧ ಹುತಾತ್ಮರಾಗಿದ್ದಾರೆ.

ಗಡಿ ಔಟ್‌ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. 24 ದಿನಗಳ ಅಂತರದಲ್ಲಿ ನಡೆದ ಮೂರನೇ ಕದನ ವಿರಾಮ ಉಲ್ಲಂಘನೆಯ ದೃಷ್ಟಾಂತ ಇದಾಗಿದೆ.

ಗಾಯಗೊಂಡಿರುವ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜಮ್ಮುವಿನಲ್ಲಿರುವ ಜಿಎಂಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ.

ಪಾಕಿಸ್ತಾನ ರೇಂಜರ್ಸ್‌ನ ಈ ಅಪ್ರಚೋದತ ದಾಳಿಗೆ ಬಿಎಸ್‌ಎಫ್‌ ಯೋಧರು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಿಎಸ್‌ಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

‘ಮಧ್ಯರಾತ್ರಿ 12.20ರ ವೇಳೆ ದಾಳಿ ಪ್ರಾರಂಭವಾಯಿತು. ಬಳಿಕ ಷೆಲ್ ದಾಳಿ ಕೂಡ ನಡೆಯಿತು. ಗುಂಡಿನ ದಾಳಿ ಹಾಗೂ ಷೆಲ್ಲಿಂಗ್‌ನಿಂದಾಗಿ ಗಡಿ ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ’ ಎಂದು ಸ್ಥಳೀಯ ಜೆರ್ಡಾ ನಿವಾಸಿ ಮೋಹನ್‌ ಕುಮಾರ್‌ ಭಟ್ಟಿ ತಿಳಿಸಿದ್ದಾರೆ.

ಇದೇ ಅಕ್ಟೋಬರ್‌ 28 ರಂದು ಪಾಕಿಸ್ತಾನ ರೇಂಜರ್ಸ್‌ ಸುಮಾರು 7 ಗಂಟೆಗಳ ಗುಂಡಿನ ಹಾಗೂ ಷೆಲ್ ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಓರ್ವ ಬಿಎಸ್‌ಎಫ್‌ ಯೋಧ ಹಾಗೂ ಓರ್ವ ಮಹಿಳೆ ಗಾಯಗೊಂಡಿದ್ದರು.

ಅಕ್ಟೋಬರ್‌ 17 ರಂದು ಅರ್ನಿಯಾ ಸೆಕ್ಟರ್‌ನಲ್ಲಿ ನಡೆದ ಅಪ್ರಚೋದಿತ ದಾಳಿಯಲ್ಲಿ ಇಬ್ಬರು ಬಿಎಸ್‌ಎಫ್‌ ಸಿಬ್ಬಂದಿಗಳು ಗಾಯಗೊಂಡಿದ್ದರು.

2021ರ ಫೆ. 25ರಂದು ಉಭಯ ರಾಷ್ಟ್ರಗಳು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದಾದ ಬಳಿಕ ನಡೆಯುತ್ತಿರುವ 6ನೆಯ ಕದನ ವಿರಾಮ ಉಲ್ಲಂಘನೆ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT