ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಡ್ರೋನ್‌ನಿಂದ 3 ಕೆ.ಜಿ ಹೆರಾಯಿನ್ ವಶ

Last Updated 11 ಮಾರ್ಚ್ 2023, 14:23 IST
ಅಕ್ಷರ ಗಾತ್ರ

ಅಮೃತಸರ‌, ಪಂಜಾಬ್: ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಶನಿವಾರ ಪಾಕಿಸ್ತಾನ ಡ್ರೋನ್ ನಿಂದ ಮೂರು ಕೆ.ಜಿ.ಗೂ ಅಧಿಕ ಹೆರಾಯಿನ್ ಅನ್ನು ಗಡಿಭಾಗದ ಕೃಷಿ ಭೂಮಿಯಲ್ಲಿ ವಶಪಡಿಸಿಕೊಂಡಿದ್ದಾರೆ.

ಬಿಎಸ್ಎಫ್ ಸಿಬ್ಬಂದಿ ಡ್ರೋನ್ ಮೇಲೆ ಗುಂಡು ಹಾರಿಸಿದರು. ಆದರೆ, ಅದು ಸರಕು ಇಳಿಸಿ ಹಿಂತಿರುಗುವಲ್ಲಿ ಯಶಸ್ವಿಯಾಯಿತು.

ಅಮೃತಸರದ ಧನೋ ಕಲನ್ ಗ್ರಾಮದ ಕೃಷಿ ಜಮೀನಿನಲ್ಲಿ 3.055 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

‘ಶನಿವಾರ ಮುಂಜಾನೆ ಡ್ರೋನ್ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಸರಕನ್ನು ಕಳ್ಳಸಾಗಣೆ ಮಾಡಲಾಗಿದೆ. ಸೈನಿಕರು ಗುಂಡು ಹಾರಿಸುವ ಮೂಲಕ ಡ್ರೋನ್ ತಡೆಯಲು ಪ್ರಯತ್ನಿಸಿದರು’ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT