ನವದೆಹಲಿ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಜಲ ನಿರ್ವಹಣೆಯ (ಎಂ–ಸಿಎಡಿಡಬ್ಲ್ಯುಎಂ) ಆಧುನೀಕರಣ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಯೋಜನೆಯ ಆರಂಭಿಕ ವೆಚ್ಚ ₹1,600 ಕೋಟಿ ಆಗಿದೆ.

ಇದನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯ ಯೋಜನೆಯ (ಪಿಎಂಕೆಎಸ್ವೈ) ಉಪ ಯೋಜನೆಯಾಗಿ ಜಾರಿಗೊಳಿಸಲಾಗುತ್ತಿದ್ದು, ಹಾಲಿ ಇರುವ ಕಾಲುವೆಗಳು ಮತ್ತು ಇತರ ಜಲ ಮೂಲಗಳ ಮೂಲಕ ನೀರು ಪೂರೈಕೆ ಜಾಲವನ್ನು ಆಧುನೀಕರಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ದೇಶದ ವಿವಿಧೆಡೆ ಇರುವ ಕೃಷಿ ಹವಾಮಾನ ವಲಯಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆರಂಭಿಕ ಅನುಮೋದನೆಯನ್ನು ಸಂಪುಟ ನೀಡಿದೆ.

ಇದರ ಸಾಧಕ– ಬಾಧಕಗಳನ್ನು ನೋಡಿಕೊಂಡು, 16ನೇ ಹಣಕಾಸು ಆಯೋಗದ ಅವಧಿಗೆ, ಅಂದರೆ 2026ರ ಏಪ್ರಿಲ್ನಿಂದ ರಾಷ್ಟ್ರಮಟ್ಟದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.