ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೆಕ್ಟ್ರಂ ಹಂಚಿಕೆಗೆ ಕೇಂದ್ರ ಸಂಪುಟ ಅಸ್ತು: ಮೂಲಬೆಲೆ ₹96 ಸಾವಿರ ಕೋಟಿಗೆ ನಿಗದಿ

Published 8 ಫೆಬ್ರುವರಿ 2024, 16:02 IST
Last Updated 8 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್ ಫೋನ್‌ಗಳಿಗೆ ಅಗತ್ಯವಿರುವ 8 ಸ್ಪೆಕ್ಟ್ರಂ ಬ್ಯಾಂಡ್‌ಗಳಿಗೆ ಹರಾಜು ಪ್ರಕ್ರಿಯೆ ಆರಂಭಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.

ಹರಾಜಿನ ಮೂಲ ಬೆಲೆಯನ್ನು ₹96,317 ಕೋಟಿಗೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ.

ದಿವಾಳಿತನ ಪ್ರಕ್ರಿಯೆಗೆ ಒಳಗಾಗಿರುವ ಕೆಲವೊಂದು ಕಂಪನಿಗಳ ಬಳಿ ಇರುವ ಸ್ಪೆಕ್ಟ್ರಂಗಳನ್ನು ಈ ವರ್ಷ ಅಂತಿಮಗೊಳಿಸಲಾಗುವುದು ಅವುಗಳನ್ನೂ ಈ ಹರಾಜಿನಲ್ಲಿ ಇಡಲು ನಿರ್ಧರಿಸಲಾಗಿದೆ.

ಮೊಬೈಲ್‌ ಸೇವೆಗಳಿಗೆ ಸಂಬಂಧಿಸಿದ ಎಂಟು ಫ್ರೀಕ್ವೆನ್ಸಿಗಳನ್ನು– 800 ಮೆಗಾಹರ್ಟ್ಸ್, 900 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್, 2100 ಮೆಗಾಹರ್ಟ್ಸ್, 2300 ಮೆಗಾಹರ್ಟ್ಸ್, 2500 ಮೆಗಾಹರ್ಟ್ಸ್, 3300 ಮೆಗಾಹರ್ಟ್ಸ್ ಹಾಗೂ 26 ಗಿಗಾ ಹರ್ಟ್ಸ್‌ ಬ್ಯಾಂಡ್‌ಗಳು ಹರಾಜು ಪ್ರಕ್ರಿಯೆಗೆ ಒಳಪಡಲಿವೆ ಎಂದು ವರದಿಯಾಗಿದೆ.

ಪ್ರತಿಯೊಂದು ತರಂಗಾಂತರಗಳಿಗೂ ಭಾರತೀಯ ದೂರ ಸಂಪರ್ಕ ಪ್ರಾಧಿಕಾರ (ಟ್ರಾಯ್) ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಿದೆ. ಆದರೆ ಮೂಲ ಬೆಲೆ ₹96,317 ಕೋಟಿಗೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT