ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಯೋಜನೆಯ ಫಲವಾಗಿ ಈ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಹಲವು ಸ್ಥರದ ಸಾಗಣೆಗಾಗಿ ಸಂಪರ್ಕ ಸಾಧಿಸುವುದು ಇದರ ಉದ್ದೇಶ. ಜನರು ಹಾಗೂ ಸರಕು ಸಾಗಣೆಗೆ ಈ ಯೋಜನೆಗಳಿಗೆ ತಡೆರಹಿತ ಸಂಚಾರ ಸಾಧ್ಯವಾಗಲಿದೆ. ರೈಲು ಮಾರ್ಗವು ಹಾದು ಹೋಗುವ ಪ್ರದೇಶಗಳು ‘ಆತ್ಮನಿರ್ಭರ’ವಾಗಿ ಅಭಿವೃದ್ಧಿ ಕಾಣಲಿದೆ. ಇದರಿಂದ ಉದ್ಯೋಗ ಮತ್ತು ಸ್ವ ಉದ್ಯೋಗ ಅವಕಾಶಗಳು ವೃದ್ಧಿಯಾಗಲಿವೆ.