ನವದೆಹಲಿ: ಉಪ ಮಹಾಲೇಖಪಾಲ (ಸಿಎಜಿ) ಹೆಚ್ಚುವರಿ ಹುದ್ದೆ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ‍್ಪಿಗೆ ನೀಡಿದೆ.

ರಾಜ್ಯಗಳ ಲೆಕ್ಕಪರಿಶೋಧನೆ, ದೂರಸಂಪರ್ಕದ ಸಮನ್ವಯವನ್ನು ನೋಡಿಕೊಳ್ಳಲು ಈ ಹುದ್ದೆ ಸೃಷ್ಟಿಸಲು ನಿರ್ಧರಿಸಲಾಯಿತು. ಈ ಹುದ್ದೆ ಸೃಷ್ಟಿಗೆ ಅಂದಾಜು ₹21 ಲಕ್ಷ ವೆಚ್ಚ ತಗುಲಲಿದೆ. ಈಗಾಗಲೇ ಐವರು ಉಪ ಮಹಾಲೇಖಪಾಲ ಹುದ್ದೆಗಳಿವೆ.

ಜಿಎಸ್‌ಎಲ್‌ವಿ:ಜಿಎಸ್‌ಎಲ್‌ವಿಯ ರಾಕೆಟ್ ಉಡಾವಣೆ ಕಾರ್ಯಕ್ರಮದ 4ನೇ ಹಂತಕ್ಕೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

ಜಿಯೋ ಇಮೇಜಿಂಗ್, ನಾವಿಗೇಶನ್, ಡಾಟಾ ರಿಲೆ ಸಂವಹನ ಸೇರಿದಂತೆ ವಿವಿಧ ಉದ್ದೇಶಗಳ ಐದು ರಾಕೆಟ್‌ಗಳನ್ನು 2021 ರಿಂದ 2024ರೊಳಗೆ ಉಡಾವಣೆ ಮಾಡುವ ಗುರಿಯನ್ನು ನಾಲ್ಕನೇ ಹಂತದ ಕಾರ್ಯಕ್ರಮ ಹೊಂದಿದೆ.

ಈ ಯೋಜನೆಗೆ ₹2,729.13 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.