ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ದೂರಸಂಪರ್ಕ ನೀತಿಗೆ ಸಚಿವ ಸಂಪುಟ ಸಮ್ಮತಿ;10,000 ಕೋಟಿ ಡಾಲರ್‌ ಹೂಡಿಕೆ ಗುರಿ

Last Updated 26 ಸೆಪ್ಟೆಂಬರ್ 2018, 12:43 IST
ಅಕ್ಷರ ಗಾತ್ರ

ನವದೆಹಲಿ:ನೂತನ ದೂರಸಂಪರ್ಕ ನೀತಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, 10 ಸಾವಿರ ಕೋಟಿ ಅಮೆರಿಕನ್‌ ಡಾಲರ್‌ನಷ್ಟು ಬಂಡವಾಳಹೂಡಿಕೆ ಸೆಳೆಯುವ ಹಾಗೂ 40 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.

’ರಾಷ್ಟ್ರೀಯ ಡಿಜಿಟಲ್‌ ಸಂಪರ್ಕ ನೀತಿ(ಎನ್‌ಡಿಸಿಪಿ) 2018’ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿರುವುದಾಗಿ ಪಿಟಿಐ ವರದಿ ಮಾಡಿದೆ.

ಎನ್‌ಡಿಸಿಪಿ ಕರಡಿನ ಪ್ರಕಾರ, ಅತ್ಯಾಧುನಿಕ ತಂತ್ರಜ್ಞಾನಗಳಾದ 5ಜಿ ಹಾಗೂ ಆಪ್ಟಿಕಲ್‌ ಫೈಬರ್‌ ಬಳಕೆ ಮಾಡುವ ಮೂಲಕ ದೇಶದಾದ್ಯಂತ ಕಡಿಮೆ ದರದಲ್ಲಿ ಅತಿ ವೇಗದ ಬ್ರಾಡ್‌ಬ್ಯಾಂಡ್ ಸೇವೆ ವಿಸ್ತರಿಸುವ ಬಗ್ಗೆ ಗಮನ ಕೇಂದ್ರೀಕರಿಸಲಿದೆ. ಎಲ್ಲ ಭಾಗದ ಜನರಿಗೆ ಸೆಕೆಂಡ್‌ಗೆ 50 ಎಂಬಿ ವೇಗದ ಬ್ರಾಂಡ್‌ಬ್ಯಾಂಡ್‌ ಸೇವೆ ಒದಗಿಸುವುದು, 5ಜಿ ಸೌಲಭ್ಯ ಹಾಗೂ 2022ರ ವೇಳೆಗೆ 40 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಕುರಿತು ನೂತನ ಕರಡು ನೀತಿ ಕೇಂದ್ರೀಕರಿಸಿದೆ.

ಸ್ಪೆಕ್ಟ್ರಂನ ದುಬಾರಿ ಬೆಲೆ ಮತ್ತು ಸಂಬಂಧಿತ ಸೇವೆಗಳ ವೆಚ್ಚಗಳಿಂದ ದೂರಸಂಪರ್ಕ ಸೇವಾ ಉದ್ಯಮಗಳು ₹7.8 ಲಕ್ಷ ಕೋಟಿ ಹೊರೆ ಅನುಭವಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT