ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಅಸ್ಸಾಂನ ಇಂಡೋ–ಬಾಂಗ್ಲಾ ಗಡಿಯಲ್ಲಿ ನಿಷೇಧ

Published 18 ಏಪ್ರಿಲ್ 2024, 5:39 IST
Last Updated 18 ಏಪ್ರಿಲ್ 2024, 5:39 IST
ಅಕ್ಷರ ಗಾತ್ರ

ಸಿಲ್ಚಾರ್‌ (ಅಸ್ಸಾಂ): ಅಸ್ಸಾಂನಲ್ಲಿ ಎಪ್ರಿಲ್ 26 ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಅಕ್ರಮ ಒಳನುಸುಳುವಿಕೆ, ಜಾನುವಾರು ಕಳ್ಳಸಾಗಣೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಕಛಾರ್‌ ಜಿಲ್ಲಾ ಆಡಳಿತವು ಬಾಂಗ್ಲಾದೇಶದೊಂದಿಗಿನ 33.6 ಕಿಮೀ ಗಡಿಯಲ್ಲಿ ನಿಷೇಧ ವಿಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಡೋ-ಬಾಂಗ್ಲಾದೇಶದ ಗಡಿಯ ಒಂದು ಕಿ.ಮೀ ಪ್ರದೇಶದಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಆದೇಶವು ತಕ್ಷಣವೇ ಜಾರಿಗೆ ಬರಲಿದ್ದು ಮುಂದಿನ ಎರಡು ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸುರ್ಮಾ ನದಿಯಲ್ಲೂ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ, ಮೀನುಗಾರಿಕೆ ನಡೆಸಲು ಅನುಮತಿ ಪಡೆಯಬೇಕು. ಇದಲ್ಲದೇ, ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಅಂತರರಾಷ್ಟ್ರೀಯ ಗಡಿಯ ಐದು ಕಿ.ಮೀ ಒಳಗೆ ಕಟಿಗೋರಾ ಪೊಲೀಸ್‌ ಅಧಿಕಾರಿ ನೀಡಿದ ಪರವಾನಗಿಯೊಂದಿಗೆ ಮಾತ್ರ ಚಲಿಸಲು ಅನುಮತಿಸಲಾಗುತ್ತದೆ. ಈ ನಿರ್ಬಂಧಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ‍ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT