ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಗೂಗಲ್‌ ಮ್ಯಾಪ್‌ ನೋಡಿಕೊಂಡು ಕಾರು ಓಡಿಸಿ ಅಪಘಾತ; ಇಬ್ಬರು ವೈದ್ಯರ ಸಾವು

Published 1 ಅಕ್ಟೋಬರ್ 2023, 15:39 IST
Last Updated 1 ಅಕ್ಟೋಬರ್ 2023, 15:39 IST
ಅಕ್ಷರ ಗಾತ್ರ

ತಿರುವನಂತಪುರ: ಕೊಚ್ಚಿಯ ಪರವೂರಿನ ಗೋತುರುತ್ತ್ ಬಳಿ ಭಾನುವಾರ ಕಾರು ನದಿಗೆ ಉರುಳಿ ಇಬ್ಬರು ಯುವ ವೈದ್ಯರು ಮೃತಪಟ್ಟಿದ್ದಾರೆ. ಎಂಬಿಬಿಎಸ್‌ ವಿದ್ಯಾರ್ಥಿ ಸೇರಿದಂತೆ ಕಾರಿನಲ್ಲಿದ್ದ ಇತರ ಮೂವರನ್ನು ರಕ್ಷಣೆ ಮಾಡಲಾಗಿದೆ.

ಗೂಗಲ್‌ ಮ್ಯಾಪ್‌ ತೋರಿಸಿದ ದಾರಿಯಲ್ಲಿ ತಿರುವು ತೆಗೆದುಕೊಂಡ ಕಾರಣ ಕಾರು ನದಿಗೆ ಉರುಳಿದೆ ಎಂದು ಕಾರಿನಲ್ಲಿದ್ದವರು ತಿಳಿಸಿದ್ದಾರೆ.

ಡಾ.ಅದ್ವೈತ್ (28) ಮತ್ತು ಡಾ.ಅಜ್ಮಲ್‌ (27) ಮೃತಪಟ್ಟವರು. ಇವರಿಬ್ಬರು ತ್ರಿಶ್ಯೂರ್‌ ಜಿಲ್ಲೆಯ ಕೊಡುಂಗಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ರಸ್ತೆಯ ತಿರುವಿಗಿಂತಲೂ ಮೊದಲು ಚಾಲಕ ತಿರುವು ತೆಗೆದುಕೊಂಡ ಕಾರಣ ಕಾರು ನದಿಗೆ ಉರುಳಿದೆ. ರಸ್ತೆ ಬದಿಯಲ್ಲಿ ಯಾವುದೇ ತಡೆಗೋಡೆ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT