ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.2 ಕೋಟಿ ಮೌಲ್ಯದ ಗೋಡಂಬಿ ವಶಕ್ಕೆ

Published 13 ಏಪ್ರಿಲ್ 2024, 14:29 IST
Last Updated 13 ಏಪ್ರಿಲ್ 2024, 14:29 IST
ಅಕ್ಷರ ಗಾತ್ರ

ಪಾಲ್ಘರ್‌: ಕರ್ನಾಟಕದಿಂದ ಗುಜರಾತ್‌ಗೆ ಸಾಗಣೆ ಮಾಡಬೇಕಾಗಿದ್ದ ₹1.2 ಕೋಟಿ ಮೌಲ್ಯದ ಗೋಡಂಬಿಯನ್ನು ಕದ್ದೊಯ್ದಿದ್ದು, ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ಪೊಲೀಸರು ಪ್ರಕರಣ ಭೇದಿಸಿ, ಗೋಡಂಬಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಉಡುಪಿ ಮೂಲದ ಪೂರೈಕೆದಾರರೊಬ್ಬರು ಏಪ್ರಿಲ್‌ 2ರಂದು ₹24.63 ಮೆಟ್ರಿಕ್‌ ಟನ್‌ ಗೋಡಂಬಿಯನ್ನು ಸೂರತ್‌ ಮತ್ತು ಅಹಮದಾಬಾದ್‌ಗೆಂದು ಕಳುಹಿಸಿದ್ದರು. 2,465 ಬಾಕ್ಸ್‌ಗಳಲ್ಲಿ ಪ್ಯಾಕ್‌ ಮಾಡಲಾಗಿದ್ದ ಗೋಡಂಬಿಯು ತಲುಪಬೇಕಾದ ಸ್ಥಳಕ್ಕೆ ತಲುಪಿರಲಿಲ್ಲ. ಹೀಗಾಗಿ ಪೂರೈಕೆದಾರರು ಪೊಲೀಸರಿಗೆ ದೂರು ನೀಡಿದ್ದರು.

ಹೀಗಾಗಿ, ಕರ್ನಾಟಕ ಪೊಲೀಸರು ಮಹಾರಾಷ್ಟ್ರ ಪೊಲೀಸ್‌ ಇಲಾಖೆಯ ನೆರವು ಕೋರಿದ್ದರು. ಗೋಡಂಬಿಯು ನಾಲಸೋಪಾರ ಮತ್ತು ನವಮುಂಬೈನ ಎರಡು ಗೋದಾಮಿನಲ್ಲಿ ಇರುವುದನ್ನು ಪಾಲ್ಘರ್‌ ಪೊಲೀಸರು ಪತ್ತೆ ಮಾಡಿದರು ಎಂದು ತಿಳಿಸಿದರು.

‘ಸದ್ಯ ₹92.7 ಲಕ್ಷ ಮೌಲ್ಯದ ಗೋಡಂಬಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನ ಮತ್ತು ಬಾಕಿ ಗೋಡಂಬಿ ವಶಕ್ಕೆ ಪ್ರಯತ್ನಿಸಲಾಗುತ್ತಿದೆ’ ಎಂದು ಹಿರಿಯ ಇನ್‌ಸ್ಪೆಕ್ಟರ್‌ ರಾಹುಲ್‌ ರಕ್ಷಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT