ಹೈದರಾಬಾದ್: ವಿವಿಧ ಬ್ಯಾಂಕುಗಳಿಗೆ ₹ 4,800 ಕೋಟಿಗೂ ಅಧಿಕ ಮೊತ್ತ ವಂಚಿಸಿದ ಅರೋಪ ಎದುರಿಸುತ್ತಿರುವ ಹೈದರಾಬಾದ್ ಮೂಲದ ಐವಿಆರ್‌ಸಿಎಲ್ ಕಂಪನಿಗೆ ಸೇರಿದ ಕಚೇರಿಗಳಲ್ಲಿ ಸಿಬಿಐ ಬುಧವಾರ ಶೋಧ ನಡೆಸಿತು.

ಈ ವಂಚನೆ ಪ್ರಕರಣದ ಆರೋಪಿಗಳಾದ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಇ.ಸುಧೀರ್ ರೆಡ್ಡಿ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಆರ್.ಬಲರಾಮಿ ರೆಡ್ಡಿ ಅವರಿಗೆ ಸೇರಿದ ಕಚೇರಿ, ಮನೆಗಳಲ್ಲಿ ಸಹ ಶೋಧ ಕಾರ್ಯ ನಡೆಸಲಾಯಿತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

‘ಎಸ್‌ಬಿಐ, ಐಡಿಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಆಂಧ್ರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಎಕ್ಸಿಮ್ ಬ್ಯಾಂಕ್, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಯೂನಿಯನ್ ಬ್ಯಾಫ್ ಆಫ್ ಇಂಡಿಯಾಗಳನ್ನು ಒಳಗೊಂಡ ಒಕ್ಕೂಟಕ್ಕೆ ಆರೋಪಿಗಳು ₹4,837 ಕೋಟಿ ವಂಚಿಸಿದ್ದಾರೆ ಎಂದು ಎಸ್‌ಬಿಐ ದೂರು ನೀಡಿತ್ತು. ಈ ದೂರಿನ ಆಧಾರದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಸಿಬಿಐ ವಕ್ತಾರ ಆರ್.ಸಿ.ಜೋಶಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.