ಚೆನ್ನೈ: ಚೆನ್ನೈ ಉಪನಗರದ ಪಣಯೂರಿನಲ್ಲಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಚೇರಿಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಮಾಹಿತಿ ಕೋರಿದ್ದಾರೆ.

ಸೆಪ್ಟೆಂಬರ್ 27 ರಂದು ವಿಜಯ್ ಅವರ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು.
.ಕರೂರು ಕಾಲ್ತುಳಿತ: ವಿಜಯ್ ನೀಡಿದ್ದ ₹20 ಲಕ್ಷ ಹಣ ವಾಪಸ್ ನೀಡಿದ ಮಹಿಳೆ.
ಸಿಬಿಐ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದ್ದನ್ನು ಪಕ್ಷದ ಜಂಟಿ ಕಾರ್ಯದರ್ಶಿ ಸಿ.ಟಿ.ಆರ್ ನಿರ್ಮಲ್ ಕುಮಾರ್ ಖಚಿತ ಪಡಿಸಿದ್ದು, ಸಿಸಿಟಿವಿ ದೃಶ್ಯವಳಿಗಳು ಸೇರಿ ಇತರ ಮಾಹಿತಿಗಳನ್ನು ಕೋರಿದ್ದಾರೆ ಎಂದು ತಿಳಿಸಿದ್ದಾರೆ.

‘ಅವರು ಮಾಹಿತಿ ಪಡೆಯಲು ಬಂದಿದ್ದರು, ವಿಚಾರಣೆಗೆ ಅಲ್ಲ. ಮಾಹಿತಿ ನೀಡಬೇಕು ಎಂದು ಸಮನ್ಸ್ ನೀಡಿದ್ದಾರೆ. ನಮ್ಮ ಪ್ರತಿನಿಧಿಯ ಮೂಲಕ ಮೂರು–ನಾಲ್ಕು ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ನಾವು ಹೇಳಿದ್ದೇವೆ. ಪಕ್ಷ ಈಗಾಗಲೇ ಆ ದಾಖಲೆಗಳನ್ನೆಲ್ಲಾ ಎಸ್ಐಟಿಗೆ ಸಲ್ಲಿಸಲಾಗಿದೆ’ ಎಂದು ಕುಮಾರ್ ವರದಿಗಾರರಿಗೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಬಳಿಕ ಪ್ರಕರಣದ ತನಿಖೆಯನ್ನು ಎಸ್ಐಟಿಯಿಂದ ಸಿಬಿಐ ವಹಿಸಿಕೊಂಡಿದೆ.
.ಕರೂರು ಕಾಲ್ತುಳಿತ: ಸಂತ್ರಸ್ತರನ್ನು ರೆಸಾರ್ಟ್ಗೆ ಕರೆಯಿಸಿ ಭೇಟಿಯಾದ TVK ವಿಜಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.