ಚೆನ್ನೈ: ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬದವರನ್ನು ನಟ ಹಾಗೂ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಇಂದು (ಸೋಮವಾರ) ಭೇಟಿ ಮಾಡಿದರು.

ಚೆನ್ನೈನ ಮಹಾಬಲಿಪುರಂನ ರೆಸಾರ್ಟ್ನಲ್ಲಿ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಕ್ಕಾಗಿ ಖಾಸಗಿ ರೆಸಾರ್ಟ್ನ 50 ಕೊಠಡಿಗಳನ್ನು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಕಾಯ್ದಿರಿಸಿತ್ತು. ಪ್ರತಿ ಸಂತ್ರಸ್ತ ಕುಟುಂಬವನ್ನು ಪ್ರತ್ಯೇಕವಾಗಿ ಭೇಟಿಯಾಗಿ ವಿಜಯ್ ತಮ್ಮ ಸಂತಾಪ ವ್ಯಕ್ತಪಡಿಸಲಿದ್ದಾರೆ.
.ಅರ್ಜುನ್ ಜನ್ಯ ನಿರ್ದೇಶನದ ‘45' ಚಿತ್ರದ ಹಾಡು ನವೆಂಬರ್ 1ರಂದು ಬಿಡುಗಡೆ.ಬಿಗ್ಬಾಸ್ ಇಡೀ ತಂಡಕ್ಕೆ ಕ್ಷಮೆಯಾಚಿಸಿದ ಅಶ್ವಿನಿ ಗೌಡ: ಕಾರಣ ಇಲ್ಲಿದೆ.
ಸಂತ್ರಸ್ತ ಕುಟುಂಬಗಳ ಜತೆ ಮಾತನಾಡಿದ ವಿಜಯ್, ಶಿಕ್ಷಣದ ಜೊತೆಗೆ ಆರ್ಥಿಕ ಸಹಾಯದ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಂತ್ರಸ್ತ ಕುಟುಂಬವನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ರೆಸಾರ್ಟ್ನಲ್ಲಿ ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದರು.

ಈ ಪ್ರಸ್ತಾಪಿತ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ವಿಜಯ್ ಅವರು ಕರೂರಿನಲ್ಲಿಯೇ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಬಹುದಿತ್ತು. ಅವರಿಗೆ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಮಾಡಿರುವುದು ಸರಿ ಅಲ್ಲ ಎಂದು ಕೆಲವರು ಟೀಕಿಸಿದ್ದರು.
.ರೈಲ್ವೆಯಲ್ಲಿ ಉದ್ಯೋಗಾವಕಾಶ: ನಿವೃತ್ತ ಸಿಬ್ಬಂದಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.ಶಬರಿಮಲೆ ಚಿನ್ನ ಕಳವು: ದೇಗುಲ ನವೀಕರಣ ಯೋಜನೆ ಹಗರಣವಾಗಿ ಮಾರ್ಪಟ್ಟಿದ್ದು ಹೇಗೆ?.
ಆದರೆ, ಕರೂರಿಗೆ ಭೇಟಿ ನೀಡಲು ವಿಜಯ್ ಅವರಿಗೆ ಅಧಿಕಾರಿಗಳಿಂದ ಅನುಮತಿ ನಿರಾಕರಿಸಿದ್ದರಿಂದ ಹೊಸ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷವು ಸ್ಪಷ್ಟಪಡಿಸಿತ್ತು.

ಸೆಪ್ಟೆಂಬರ್ 27ರಂದು ನಡೆದ ವಿಜಯ್ ಅವರ ಟಿವಿಕೆ ಸಭೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
.ವೃತ್ತಿ ಜೀವನ ಹೊರತುಪಡಿಸಿ ಜೀವನದಲ್ಲಿ ಸಾಧಿಸಲು ಹಲವು ಸಂಗತಿಗಳಿವೆ: ರೋಹಿತ್ ಶರ್ಮಾ.ಡಿಜಿಟಲ್ ಅರೆಸ್ಟ್ ಪ್ರಕರಣಗಳ FIR ಮಾಹಿತಿ ನೀಡುವಂತೆ ರಾಜ್ಯಗಳಿಗೆ SC ನೋಟಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.