ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಕೊನೆಗೊಂಡ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕದೊಂದಿಗೆ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ ರೋಹಿತ್ ಶರ್ಮಾ ಅವರು ಅದನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ವೃತ್ತಿ ಬದುಕಿನ ಜತೆಗೆ ಹಲವು ಆಯಾಮಗಳತ್ತ ನೋಡುವ ಕುರಿತೂ ಅವರು ಮಾತನಾಡಿದ್ದಾರೆ.

ಕೊನೆಯ ಪಂದ್ಯದಲ್ಲಿ ಅವರು 121 ರನ್ ಸಿಡಿಸಿ ಅಜೇಯರಾಗಿ ಉಳಿದರು. ಆ ಪಂದ್ಯದಲ್ಲಿ ಭಾರತವು 9 ವಿಕೆಟ್ಗಳ ಅಂತರದಿಂದ ಆಸ್ಟ್ರೇಲಿಯಾವನ್ನು ಮಣಿಸಿತು. ಆ ಮೂಲಕ ಆತಿಥೇಯರು ಭಾರತ ತಂಡದ ವಿರುದ್ಧದ ವೈಟ್ವಾಷ್ ಯೋಜನೆಯ ಕನಸನ್ನು ರೋಹಿತ್ ಮತ್ತು ವಿರಾಟ್ ನುಚ್ಚುನೂರು ಮಾಡಿದರು. ಇದರಿಂದಾಗಿ ಸರಣಿಯನ್ನು ಆಸ್ಟ್ರೇಲಿಯಾ 2–1ರ ಅಂತರದಿಂದ ಗೆದ್ದುಕೊಂಡಿತು.

ಕಳೆದ ಮೇನಲ್ಲಿ ಐಪಿಎಲ್ ಆಡಿದ ನಂತರ ಈ ಸರಣಿ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ರೋಹಿತ್ ಶರ್ಮಾ, ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಗಳನ್ನು ಬಾಚಿಕೊಂಡು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

‘ನಾನು ಆಟ ಆರಂಭಿಸಿದಾಗಿನಿಂದ ಯಾವುದೇ ಒಂದು ಸರಣಿಗೆ 4ರಿಂದ 5 ತಿಂಗಳು ಅಭ್ಯಾಸ ನಡೆಸಿದ ಉದಾಹರಣೆಯೇ ಇಲ್ಲ. ಈ ಬಾರಿ ಸಾಕಷ್ಟು ಸಮಯ ಸಿಕ್ಕಿತು. ಅದು ನನಗೆ ಬಹಳಷ್ಟು ಅನುಕೂಲವನ್ನೇ ಮಾಡಿತು. ಈ ಯಶಸ್ಸಿನ ಆಧಾರದಲ್ಲಿ ನನ್ನ ಉಳಿದ ಬದುಕನ್ನು ನಾನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನೂ ಅರ್ಥ ಮಾಡಿಕೊಂಡಿದ್ದೇನೆ’ ಎಂದು ಬಿಸಿಸಿಐ ಅಂತರ್ಜಾಲ ತಾಣಕ್ಕೆ ರೋಹಿತ್ ತಿಳಿಸಿದ್ದಾರೆ.

‘ಸಮಯದ ಸದ್ಬಳಕೆ ಅತಿ ಮುಖ್ಯ. ಹೀಗಾಗಿ ನನಗೆ ಸಿಕ್ಕ ಸಾಕಷ್ಟು ಸಮಯವನ್ನು ಉತ್ತಮ ಅಭ್ಯಾಸಕ್ಕೆ ಮೀಸಲಿಟ್ಟೆ. ಭಾರತದಲ್ಲಿನ ಆಟದ ಪರಿಸ್ಥಿತಿಗೂ ಆಸ್ಟ್ರೇಲಿಯಾದಲ್ಲಿ ಆಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಇಲ್ಲಿಗೆ ನಾನು ಹಲವು ಬಾರಿ ಬಂದಿದ್ದೇನೆ. ಆದರೆ ಸರಿಯಾದ ಲಯಕ್ಕೆ ಮರಳುವುದಷ್ಟೇ ಇಲ್ಲಿ ಮುಖ್ಯ’ ಎಂದಿದ್ದಾರೆ.

ವಿರಾಟ್ ಜತೆಗಿನ ಗೆಲುವಿನಾಟವನ್ನು ಕೊಂಡಾಡಿದ ರೋಹಿತ್

‘ಇಲ್ಲಿಗೆ ಬರುವ ಮುಂಚೆ ನಾನು ನೆಟ್ನಲ್ಲಿ ಕಳೆದ ಸಮಯಕ್ಕೆ ನಾನು ಹೆಚ್ಚಿನ ಅಂಕಗಳನ್ನು ನೀಡುತ್ತೇನೆ. ವೃತ್ತಿಗಿಂತಲೂ ಬದುಕಿನಲ್ಲಿ ಸಾಧಿಸಲು ಬಹಳಷ್ಟು ಇದೆ. ಆದರೆ ಈ ಬಾರಿ ನನಗೆ ಸಾಕಷ್ಟು ಸಮಯ ಸಿಕ್ಕಿತು. ಅದನ್ನು ಸಮರ್ಪಕವಾಗಿ ಬಳಸಿಕೊಂಡೆ’ ಎಂದ ಅವರು ಬಹುದಿನಗಳ ನಂತರ ವಿರಾಟ್ ಜತೆಗೂಡಿ ಪಂದ್ಯವನ್ನು ಗೆಲ್ಲಿಸಿದ ಸಂಭ್ರಮವನ್ನು ನೆನಪಿಸಿಕೊಂಡಿದ್ದಾರೆ.

‘ಬಹಳಾ ದಿನಗಳ ನಂತರ ನನ್ನ ಹಾಗೂ ಕೊಹ್ಲಿ ನಡುವಿನ ಜತೆಯಾಟ ಕೂಡಿಬಂತು. ಆದರೆ ಅದು 100ರ ಗಡಿ ದಾಟಲಿಲ್ಲ ಎಂಬ ಬೇಸರವಿದೆ. ತಂಡವಾಗಿಯೂ ಈ ಜತೆಯಾಟ ಬಹಳಾ ಮುಖ್ಯ. ಶುಭಮನ್ ಗಿಲ್ ಬಹುಬೇಗ ಔಟಾದರು. ಗಾಯಗೊಂಡಿದ್ದ ಶ್ರೇಯಸ್ ಐಯರ್ ಲಭ್ಯರಿಲ್ಲ ಎಂಬುದು ತಿಳಿದ ವಿಷಯವಾಗಿತ್ತು. ಹೀಗಾಗಿ ಬ್ಯಾಟರ್ಗಳ ಮೇಲೆ ದೊಡ್ಡ ಜವಾಬ್ದಾರಿಯೇ ಇತ್ತು. ಕ್ರೀಡಾಂಗಣದಲ್ಲಿ ಕಳೆದ ಪ್ರತಿಯೊಂದು ಗಳಿಗೆಯನ್ನೂ ನಾವು ಸಂಭ್ರಮಿಸಿದ್ದೇವೆ. ನಮ್ಮ ನಡುವೆ ಸಾಕಷ್ಟು ಸಂಭಾಷಣೆಗಳೂ ನಡೆದವು’ ಎಂದು ಬ್ಯಾಟಿಂಗ್ ಸಂದರ್ಭವನ್ನು ರೋಹಿತ್ ನೆನಪಿಸಿಕೊಂಡಿದ್ದಾರೆ.

'ಈ ಸರಣಿಯಲ್ಲಿ ಸೋತಿರಬೇಕು. ಆದರೆ ಸಾಕಷ್ಟು ಸಕಾರಾತ್ಮಕ ಅಂಶಗಳು ಮೂಡಿಬಂದಿವೆ. ಆಸ್ಟ್ರೇಲಿಯಾದಲ್ಲಿ ಬಿಳಿ ಚೆಂಡಿನಲ್ಲಿ ಮೊದಲ ಬಾರಿಗೆ ಹರ್ಷಿತ್ ರಾಣಾ ಆಡಿದ್ದಾರೆ. ಸಿಡ್ನಿ ಹಾಗೂ ಅಡಿಲೇಡ್ನಲ್ಲಿನ ಅವರ ಆಟ ಅದ್ಭುತವಾಗಿತ್ತು. ಜತೆಗೆ ನಮ್ಮ ಹಾಗೂ ತಂಡದ ಆಟಕ್ಕೂ ಸಾಕಷ್ಟು ಬೆಂಬಲ ವ್ಯಕ್ತವಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ದುರದೃಷ್ಟವಶಾತ್ ನಾವು ಸರಣಿ ಗೆಲ್ಲಲಿಲ್ಲ. ಆದರೆ ಇಲ್ಲಿನ ಪ್ರತಿ ಕ್ಷಣವನ್ನೂ ಸಂಭ್ರಮಿಸಿದ್ದೇವೆ’ ಎಂದು ರೋಹಿತ್ ಹೇಳಿದ್ದಾರೆ.